»   » ತಮ್ಮ ಲವ್ವು ಹಾಗೂ ಮದುವೆ ಸುದ್ದಿಗಳು ಗಾಳಿಯಲ್ಲಿ ಆಗೊಮ್ಮೆ ಈಗೊಮ್ಮೆ ತೇಲುವುದು ಸಾಮಾನ್ಯವಾಗಿರುವುದರಿಂದ ಪ್ರೇಮಾ ನಖಶಿಖಾಂತ ಉರಿದುಬಿದ್ದಿದ್ದಾರೆ.

ತಮ್ಮ ಲವ್ವು ಹಾಗೂ ಮದುವೆ ಸುದ್ದಿಗಳು ಗಾಳಿಯಲ್ಲಿ ಆಗೊಮ್ಮೆ ಈಗೊಮ್ಮೆ ತೇಲುವುದು ಸಾಮಾನ್ಯವಾಗಿರುವುದರಿಂದ ಪ್ರೇಮಾ ನಖಶಿಖಾಂತ ಉರಿದುಬಿದ್ದಿದ್ದಾರೆ.

Subscribe to Filmibeat Kannada

*ಅಯ್ಯಪ್ಪ

ಕೊಡಗು ಕಾಫಿ ಪ್ಲಾಂಟರ್‌ ಉತ್ತಯ್ಯನ ಜತೆ ಪ್ರೇಮಾ ಮೂರು ತಿಂಗಳ ಹಿಂದೆಯೇ ಗುಟ್ಟಾಗಿ ಮದುವೆಯಾಗಿದ್ದಾರೆ !
ಕಾನಿಷ್ಕಾ ಅಂಗಳದಲ್ಲಿ ಇಂಥದೊಂದು ಸುದ್ದಿ ಹಬ್ಬಿಕೊಂಡಿರುವುದಕ್ಕೆ ಪ್ರೇಮಾ ಕೆಂಡಾಮಂಡಲಾಗಿದ್ದಾರೆ. ಗಾಂಧಿನಗರಿಯಲ್ಲಿ ತಮಗೂ ಶತ್ರುಗಳಿದ್ದಾರೆ. ತಮ್ಮ ಕಾಲೆಳೆಯಲು ಅವರೆಲ್ಲ ಇಂಥಾ ಗಾಳಿಪಟ ಬಿಡುತ್ತಿದ್ದಾರೆ ಅಂತ ಕಂಗಳನ್ನು ಊರಗಲ ಬಿಟ್ಟುಕೊಂಡು ಕೆಕ್ಕರಿಸುವಷ್ಟು ಪ್ರೇಮಾ ಕೆರಳಿದ್ದಾರೆ.

ಈ ಸುದ್ದಿ ನಿಜವೇ ಎಂಬೊಂದು ಪ್ರಶ್ನೆಯನ್ನು ಮುಂದಿಟ್ಟಿದ್ದೇ ತಡ, ಪ್ರೇಮಾ ಎಗರಾಡತೊಡಗಿದರು-
‘ಕೆಲವು ಪ್ರೆಸ್‌ನವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ ಅನಿಸುತ್ತೆ. ನನ್ನ ಮದುವೆ ವಿಚಾರಾನ ಕನ್ಫರ್ಮ್‌ ಮಾಡಿಕೊಂಡು ತಾನೆ ಬರೀಬೇಕು? ಮೂರು ತಿಂಗಳ ಹಿಂದೆ ನಾನು ಮದುವೆ ಮಾಡಿಕೊಂಡಿದ್ದಿದ್ದರೆ, ಶೂಟಿಂಗಲ್ಲಿ ಆರಾಮಾಗಿ ತೊಡಗಿಕೊಳ್ಳಲು ಸಾಧ್ಯವಿತ್ತೆ ? ಕಳೆದ ಒಂದು ವರ್ಷದಿಂದ ನಾನು ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ನಂಗೆ ಮದುವೆ ಆಗೋದಿರಲಿ, ಅದರ ಬಗ್ಗೆ ಯೋಚಿಸೋಕೂ ಸದ್ಯಕ್ಕೆ ಪುರುಸೊತ್ತಿಲ್ಲ.

‘ಇಂಥಾ ಪಿತೂರಿಗಳು ನನಗೆ ಹೊಸದೇನೂ ಅಲ್ಲ. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಸಿನಿಮಾದಲ್ಲಿ ನಟಿಸಿದ ನಂತರ, ಶಾಸಕ ಕಂ ನಟ ಸಿ.ಪಿ.ಯೋಗೇಶ್ವರ್‌ ಜತೆ ನನ್ನ ಹೆಸರನ್ನು ಸೇರಿಸಿದರು. ಅವರಿಗಾಗಲೇ ಮದುವೆ ಆಗಿರುವುದರಿಂದ, ನನ್ನನ್ನು ಮನೆ ಮುರುಕಿ ಎಂದರು. ನಾನು ಅವರ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಕ್ಕೆ ಇಷ್ಟೆಲ್ಲಾ ಕಿರಿಕ್ಕು ಮಾಡಿದರು. ಈ ರೀತಿ ಗಾಸಿಪ್ಪು ಹಬ್ಬಿಸುವುದರ ಹಿಂದೆ ಇರುವ ಉದ್ದೇಶಗಳೂ ನನಗೆ ಗೊತ್ತು. ಆಮೇಲೆ ನವನಟ ಶಿವಧ್ವಜ್‌ಗೂ, ನನಗೂ ಸಂಬಂಧ ಇದೆ ಅಂತ ಬರೆದರು. ಇನ್ನೂ ಕಣ್ಣು ತೆರೆಯುತ್ತಿರುವ ನಟನ ಜತೆ ನಾನು ಹಾಗೆ ವರ್ತಿಸಲು ಸಾಧ್ಯವೇ? ಆತನಿಗೆ ಛಾನ್ಸ್‌ ಕೊಡಿಸುತ್ತಿರೋದೇ ನಾನು ಅಂತಲೂ ಸುದ್ದಿ ಹಬ್ಬಿತು. ನನ್ನ ಯಶಸ್ಸನ್ನು ಸಹಿಸಲಾರದವರು ಹಬ್ಬಿಸುತ್ತಿರುವ ಗುಲ್ಲುಗಳಿವು.

‘ನಿಮ್ಮ ದಮ್ಮಯ್ಯ, ಇಲ್ಲಸಲ್ಲದ್ದನ್ನು ಬರೀಬೇಡಿ. ಮದುವೆ ಆಗಲು ತೀರ್ಮಾನಿಸಿದರೆ, ಪೇಪರ್‌ನವರಿಗೆಲ್ಲ ಹೇಳಿಯೇ ಆಗುತ್ತೇನೆ. ಮುದ್ರಿಸುವ ಅಕ್ಷರಕ್ಕೆ ಬೆಲೆಯಿರುತ್ತದೆ. ಒಂದು ಸಲ ನಾನು ಮಾಡದ ತಪ್ಪಿಗಾಗಿ ಸಾವಿರ ಅಭಿಮಾನಿಗಳ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗಿತ್ತು. ಇದಕ್ಕೂ ಸುಳ್ಳು ಸುದ್ದಿ ಪ್ರಕಟವಾದದ್ದೇ ಕಾರಣ’.

ಅಂದಹಾಗೆ, ಪ್ರೇಮಾ ಇನ್ನು ಯಾವುದಕ್ಕೂ ಕೇರ್‌ ಮಾಡದಿರಲು ಪಣ ತೊಟ್ಟಿದ್ದಾರೆ. ಮನಸ್ಸನ್ನು ಗಟ್ಟಿ ಮಾಡಿಕೊಂಡು ಗಾಂಧಿನಗರದ ಕೂಪದಲ್ಲಿ ಏಗಲು ಈಗ ನಿತ್ಯವೂ ತಪ್ಪದೆ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅಂದಹಾಗೆ, ಪ್ರೇಮಾ ಅವರಿಗೆ ಕರಾಟೆ ಕೂಡ ಗೊತ್ತು !

Post your views

‘ಪ್ರೇಮಾ’ಯಣ
ಶಿವನಿಗೊಲಿದಳೆ ನಮ್ಮೂರ ಮಂದಾರ ಹೂ ಪ್ರೇಮಾ
ಪೊರೆ ಕಳಚಿದ ಪ್ರೇಮಾ ಪಾರದರ್ಶಕವಾದ ಕಥಾನಕವು..
ಸಿನಿಮಾದಲ್ಲಿ ದೇವಿ ಹೋದಲ್ಲಿ ಮೂದೇವಿ
ಉಪ್ಪಿ , ಪ್ರೇಮ ಹುಷಾರು! ಗುರ್ರ್‌ ಎಂದರು ಸಹ ಕಲಾವಿದರು

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada