»   » ಅಪ್ಪ ಸುನೀಲ್‌ಗೆ ಕೈಕೊಟ್ಟ ಮಗ !

ಅಪ್ಪ ಸುನೀಲ್‌ಗೆ ಕೈಕೊಟ್ಟ ಮಗ !

Posted By: Staff
Subscribe to Filmibeat Kannada
Sanjay
ಅನುವಂಶಿಕ ಆಡಳಿತವು ಭಾರತೀಯ ರಾಜಕಾರಣದ ಪರಂಪರೆಯಲ್ಲಿ ಅಡಕವಾಗಿದೆ. ಹಾಗೆಂದ ಮಾತ್ರಕ್ಕೆ ವಿದೇಶದಲ್ಲಿ ಈ ವಂಶವಾಹಿ ಇಲ್ಲ ವೆಂದೇನಲ್ಲ ! ಆದರೂ ಇಲ್ಲಿ ಸೋನಿಯಾ ಪರ ಪ್ರಿಯಾಂಕ , ಗೌಡರ ಪರ ಸ್ವಾಮಿ, ಜಸ್ವಂತ್‌ ಪರ ದುಶ್ಯಂತ್‌, ಮೇನಕಾ ಪರ ವರುಣ್‌ ಪ್ರಚಾರಕ್ಕೆ ಬರುತ್ತಾರೆ. ತಮ್ಮ ಚರಿಶ್ಮಾ ಪ್ರಯೋಗಿಸಲು ಪ್ರಯತ್ನಿಸುತ್ತಾರೆ. ಯಾಕಂದ್ರೆ ಮುಂದೆ ಅದೇ ಪಟ್ಟಕ್ಕೆ ಏರುವವರು ಅವರೇ ತಾನೆ!

ಈ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಬಾಲಿವುಡ್‌ನ 'ದತ್‌ ಮನೆತನ". ಸದಾ ಒಂದಲ್ಲಾ ಇನ್ನೊಂದು ಸುದ್ದಿಯಲ್ಲಿರುವ ಸಂಜಯ್‌ ದತ್‌ ಈ ಸಂಪ್ರದಾಯದ ವಿರುದ್ಧ ಹೋಗಲಿದ್ದಾರೆ. ಅದಕ್ಕೆ ಅವರ ಹಿನ್ನಲೆಗಳೇ ಕಾರಣ.

ಪ್ರಸ್ತುತ ಚುನಾವಣೆಯಲ್ಲಿ ವಾಯುವ್ಯ ಮುಂಬಯಿ ಕ್ಷೇತ್ರದಲ್ಲಿ ಸುನಿಲ್‌ ದತ್‌ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಲಿದ್ದಾರೆ. ಇವರ ವಿರುದ್ಧ ಶಿವಸೇನಾ ಅಭ್ಯರ್ಥಿ ಸಂಜಯ್‌ ನಿರುಪಮ್‌ ಕಣಕ್ಕಿಳಿಯಲಿದ್ದಾರೆ.

ಹಿಂದೊಮ್ಮೆ , 1993ರ ಬಾಂಬೆ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂಜಯ್‌ದತ್‌ನನ್ನು ಬಚಾವ್‌ ಮಾಡಲು ಶಿವಸೇನೆ ಕ್ಯಾಪ್ಟನ್‌ ಬಾಳಾಠಾಕ್ರೆ ಶ್ರಮಿಸಿದ್ದರು. ಹೀಗಿರುವಾಗ ಸಂಜಯ್‌ದತ್‌ ಶಿವಸೇನೆ ವಿರುದ್ಧ ಪ್ರಚಾರ ಮಾಡುವುದಾದರೂ ಹೇಗೆ ಸಾಧ್ಯ!

ಅಪ್ಪನಾದರೂ ಅಷ್ಟೇ, ಒಡಹುಟ್ಟುಗಳಾದರೂ ಅಷ್ಟೇ. ಮಹಾಭಾರತದ ಕರ್ಣ ಹೇಳಿದಂತೆ ಜೋಳದಪಾಳಿಯ ಋಣ ದೊಡ್ಡದಲ್ಲವೇ? ಇದನ್ನರಿತವನಂತೆ, ಸಂಜಯ್‌ ಸುಬೌರ್‌ಬನ್‌ ಬಾಂದ್ರಾದಲ್ಲಿರುವ ಠಾಕ್ರೆ ಮನೆ 'ಮಾತೋಶ್ರಿ"ಗೆ ಹೋಗಿ ತಂದೆ ಪರ ಪ್ರಚಾರ ಮಾಡುವುದಿಲ್ಲ ಅಂತ ಭರವಸೆ ನೀಡಿರುವನಂತೆ. ಇಷ್ಟೇಅಲ್ಲ , ನನ್ನ ನಾಯಕ ವಾಜಪೇಯಿ ಎಂದೂ ಸಂಜಯ್‌ದತ್‌ ಘೋಷಿಸಿದ್ದಾನೆ. ಒಟ್ಟಿನಲ್ಲಿ ಅಪ್ಪಂದಿರಿಗಿದು ಕಾಲವಲ್ಲ !(ಏಜನ್ಸೀಸ್‌)

English summary
Sanjay assures Thackeray that he will not to campaign for his father Sunil dutt

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada