ಪಾರ್ವತಮ್ಮ, ಲೀಲಾವತಿ, ಚೇತನ್ ಮತ್ತಿತರರಿಗೆ ಪ್ರಶಸ್ತಿ
ಬೆಂಗಳೂರು : ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ನಟಿ ಲೀಲಾವತಿ, ಪತ್ರಕರ್ತ ಚೇತನ್ ನಾಡಿಗೇರ್ ಸೇರಿದಂತೆ ವಿವಿಧ ಗಣ್ಯರಿಗೆ ಪ್ರಸಕ್ತ ಸಾಲಿನ ಸುಧೀಂದ್ರ ಪ್ರಶಸ್ತಿ ಸಂದಿದೆ.
ಪ್ರಚಾರಕರ್ತ ಸುಧೀಂದ್ರ ಅವರು ಈ ಪ್ರಶಸ್ತಿಗಳನ್ನು ನೀಡುತ್ತಿದ್ದರು. ಅವರ ನಿಧನದ ನಂತರ ಪಿಆರ್‌ಓ ವೆಂಕಟೇಶ್, ಈ ಪ್ರಶಸ್ತಿ ನೀಡುವ ಪರಿಪಾಠವನ್ನು ಮುಂದುವರಿಸಿದ್ದಾರೆ. ಪ್ರಸಕ್ತ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಏ.21ರಂದು ಯವನಿಕಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪಟ್ಟಿಯಲ್ಲಿರುವ ಪ್ರಮುಖರು :
- ಅತ್ಯುತ್ತಮ ನಿರ್ಮಾಪಕಿ ಪ್ರಶಸ್ತಿ -ಪಾರ್ವತಮ್ಮ ರಾಜ್‌ಕುಮಾರ್
- ಜಯಮಾಲಾ ಪ್ರಶಸ್ತಿ -ಲೀಲಾವತಿ
- ಶ್ರೇಷ್ಠ ಪತ್ರಕರ್ತ ಪ್ರಶಸ್ತಿ -ಶ್ರೀಕೃಪಾ
- ಯುವ ಪತ್ರಕರ್ತ ಪ್ರಶಸ್ತಿ -ಚೇತನ್ ನಾಡಿಗೇರ್(ನಾಡಿಗೇರ್ ಕೃಷ್ಣರಾಯರ ಮೊಮ್ಮಗ)
- ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ -ಮನೋ ಮೂರ್ತಿ


Click it and Unblock the Notifications