»   » ಮನರಂಜನಾ ತೆರಿಗೆ ಪರಿಷ್ಕರಣೆಗೆ ಮಾತುಕತೆಯ ಭರವಸೆ

ಮನರಂಜನಾ ತೆರಿಗೆ ಪರಿಷ್ಕರಣೆಗೆ ಮಾತುಕತೆಯ ಭರವಸೆ

Subscribe to Filmibeat Kannada

ಬೆಂಗಳೂರು : ರಾಜಧಾನಿಯ ಕೇಬಲ್‌ ಆಪರೇಟರ್‌ಗಳು ಏಪ್ರಿಲ್‌ 25ರ ಸಂಜೆ ತಮ್ಮ ಮುಷ್ಕರವನ್ನು ವಾಪಸ್ಸು ಪಡೆಯುವುದರೊಂದಿಗೆ ನಗರದ ಮನೆಮನೆಗಳ ಟೀವಿ ಪರದೆಗಳು ಮತ್ತೆ ಮಾತನಾಡಿದವು.

ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಕೊಟ್ಟಿದೆ. ಮನರಂಜನಾ ತೆರಿಗೆಯನ್ನು ಪುನರ್‌ ಪರಿಶೀಲಿಸುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ವಾಣಿಜ್ಯ ತೆರಿಗೆ ಆಯುಕ್ತ ಎ.ಸಿ.ಮನೋಳಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಶುಕ್ರವಾರ ಸಂಜೆಯಿಂದ ವಾಪಸ್ಸು ಪಡೆಯಲಾಗಿದೆ ಎಂದು ಕೇಬಲ್‌ ಆಪರೇಟರ್‌ಗಳ ಸಂಘದ ವಕ್ತಾರ ಕೆ.ಆರ್‌.ಲೋಕೇಶ್‌ ತಿಳಿಸಿದ್ದಾರೆ.

ಮನರಂಜನಾ ತೆರಿಗೆಯನ್ನು ಮೂರು ಸಾವಿರ ರುಪಾಯಿಯಿಂದ ಏಳೂವರೆ ಸಾವಿರ ರುಪಾಯಿಗೆ ಏಕಾಏಕಿ ಹೆಚ್ಚಿಸಿದ ಸರ್ಕಾರವನ್ನು ವಿರೋಧಿಸಿ ಬೆಂಗಳೂರು ನಗರ ಕೇಬಲ್‌ ಆಪರೇಟರ್‌ಗಳು ಏಪ್ರಿಲ್‌ 24ರಿಂದ ಅನಿರ್ದಿಷ್ಟ ಕಾಲದವರೆಗೆ ‘ಕೇಬಲ್‌ ಟೀವಿ ಬಂದ್‌’ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಕೇಬಲ್‌ ಟೀವಿ ಆಪರೇಟರ್‌ಗಳ ಮುಷ್ಕರದಿಂದಾಗಿ ಬೆಂಗಳೂರು ನಗರದಲ್ಲಿ ಗುರುವಾರ ಹಾಗೂ ಶುಕ್ರವಾರ ವಿಸಿಡಿ ಅಂಗಡಿಗಳಲ್ಲಿ ಬಿರುಸಿನ ವ್ಯಾಪಾರ ನಡೆದಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada