»   » ಸ್ಟೈಲ್‌ ಮಾಸ್ಟರ್‌ ರಜನೀಕಾಂತ್‌ಗೆ ರಾಜ್‌ಕಪೂರ್‌ ಪ್ರಶಸ್ತಿ

ಸ್ಟೈಲ್‌ ಮಾಸ್ಟರ್‌ ರಜನೀಕಾಂತ್‌ಗೆ ರಾಜ್‌ಕಪೂರ್‌ ಪ್ರಶಸ್ತಿ

Subscribe to Filmibeat Kannada

ಥಾಣೆ : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಮಹಾರಾಷ್ಟ್ರ ಸರ್ಕಾರ ನೀಡುವ ರಾಜ್‌ ಕಪೂರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಏಪ್ರಿಲ್‌ 30ರಂದು ಪ್ರದಾನ ಮಾಡಲಾಗುವುದು. ಪುರಸ್ಕಾರವು ಒಂದು ಲಕ್ಷ ರೂಪಾಯಿ ನಗದು, ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಮೂಲತಃ ಕನ್ನಡಿಗರಾದ ರಜನೀಕಾಂತ್‌(ಮೊದಲ ಹೆಸರು ಶಿವಾಜಿರಾವ್‌ ಗಾಯಕವಾಡ್‌) ಬೆಂಗಳೂರಿನಲ್ಲಿ ಕಂಡಕ್ಟರಾಗಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಕನ್ನಡ, ತಮಿಳು, ಹಿಂದಿ ಹಾಗೂ ಇತರ ಭಾಷೆಗಳು ಸೇರಿದಂತೆ ಸುಮಾರು 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ ವಿಶಿಷ್ಟ ಶೈಲಿಯ ಅಭಿನಯದಿಂದ ಖ್ಯಾತಿ ಗಳಿಸಿರುವ ರಜನೀಕಾಂತ್‌, ಪ್ರಸ್ತುತ ತಮಿಳುನಾಡಿನ ಆರಾಧ್ಯದೈವವಾಗಿ ಬೆಳೆದಿರುವುದು ಮಾತ್ರ ಇತಿಹಾಸ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada