»   » ‘ವರ್ಷದೊಳಗೆ ಅನುರೂಪ ವರನೊಡನೆ ಶಿಲ್ಪಾ ಮದುವೆ’

‘ವರ್ಷದೊಳಗೆ ಅನುರೂಪ ವರನೊಡನೆ ಶಿಲ್ಪಾ ಮದುವೆ’

Subscribe to Filmibeat Kannada


ಬೆಂಗಳೂರು : ಸಾರ್ವಜನಿಕ ವೇದಿಕೆ ಮೇಲೆ ಮುತ್ತು ಪಡೆದು ತಿಪ್ಪೆ ಸಾರಿಸಿದ ನಂತರ, ಶಿಲ್ಪಾಶೆಟ್ಟಿ ಎಲ್ಲಿಗೋದರು? ಎಲ್ಲೆಲ್ಲೋ ಹುಡುಕಬೇಡಿ.. ಅವರು ಸೀದಾ ಅಜ್ಜಿಮನೆಗೆ ಬಂದಿದ್ದಾರೆ!

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಅಜ್ಜಿಮನೆಯಲ್ಲಿ ಎರಡು-ಮೂರು ದಿನದಿಂದ ತಂಗಿದ್ದಾರೆ. ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕಾಗಿ ಅವರು ಇನ್ನೂ ನಾಲ್ಕೈದು ದಿನ, ಕರ್ನಾಟಕದಲ್ಲಿರಲಿದ್ದಾರೆ. ತಾಯಿ ಸುನಂದಾ ಶೆಟ್ಟಿ , ತಂಗಿ ಶಮಿತಾ ಶೆಟ್ಟಿ ಜೊತೆ ಇದ್ದಾರೆ. ನಾಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ರಾತ್ರಿಯಿಡೀ ಜಾಗರಣೆ ಮಾಡುತ್ತಾ, ಅವರು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಿದ್ದೋಡಿ ಬಳಿ ಜಾರಂದಾಯ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಭೂತ ಕೋಲ ವೀಕ್ಷಿಸಿದರು. ಈ ಸಂದರ್ಭದಲ್ಲಿ ದೈವವು, ಶಿಲ್ಪಾಗೆ ವರ ನೀಡಿದೆ. ಇನ್ನೊಂದು ವರ್ಷದೊಳಗಾಗಿ ಅನುರೂಪ ವರನನ್ನು ಶಿಲ್ಪಾ ಮದುವೆಯಾಗಲಿದ್ದಾಳೆ ಎಂದು ಅಭಯ ನೀಡಿದೆ.

ಅಪ್ಪಟ ಹಳ್ಳಿ ಹುಡುಗಿಯಂತೆಯೇ, ದೊಡ್ಡ ಸ್ಟಾರಿಣಿ ಎಂಬ ಬಿಂಕವಿಲ್ಲದೇ ಶಿಲ್ಪಾ ತಮ್ಮೂರಲ್ಲಿ ಸುತ್ತಾಡುತ್ತಿದ್ದಾರೆ. ಎಲ್ಲರನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದಾರೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada