»   » ಅಪ್ಪು ಚಿತ್ರ ಏಪ್ರಿಲ್‌ 26 ರ ಶುಕ್ರವಾರ ರಾಜ್ಯಾದ್ಯಂತ

ಅಪ್ಪು ಚಿತ್ರ ಏಪ್ರಿಲ್‌ 26 ರ ಶುಕ್ರವಾರ ರಾಜ್ಯಾದ್ಯಂತ

Posted By: Staff
Subscribe to Filmibeat Kannada

ಅಣ್ಣಾವ್ರ ಸಿನಿಮಾವಂತೂ ಇಲ್ಲ , ಅಪ್ಪು ಚಿತ್ರವಾದರೂ ಇದೆ ಎನ್ನುವ ಸಡಗರ ರಾಜ್‌ ಅಭಿಮಾನಿಗಳಿಗೆ. ಅಪ್ಪುವನ್ನು ಅಪ್ಪಿಕೊಳ್ಳಲು ಅವರಂತೂ ಸಿದ್ಧರಾಗಿದ್ದಾರೆ. ಅಪ್ಪುವನ್ನು ಅವರು ಸ್ವಾಗತಿಸಿದ್ದು ಹೇಗೆ ಗೊತ್ತಾ ? ಓದಿ-

  • ಬೆಳಗಿನ ಪ್ರದರ್ಶನಕ್ಕೆ ಸಂತೋಷ್‌ ಚಿತ್ರಮಂದಿರದಲ್ಲಿ ಬೆಂಗಳೂರು ಜಿಲ್ಲಾ ಕಲಾ ಕಂಠೀರವ ಶಿವರಾಜ್‌ ಕುಮಾರ್‌ ಅಭಿಮಾನಿಗಳಿಂದ ಸಿಹಿ ವಿತರಣೆ ಹಾಗೂ ಹೊಯ್ಸಳ ದೊರೆ ಶಿವರಾಜ್‌ಕುಮಾರ್‌ ಸೇನಾ ಸಮಿತಿ, ಜಲಕಂಠೇಶ್ವರನಗರ, ವಿಲ್ಸನ್‌ ಗಾರ್ಡನ್‌ ಬೆಂಗಳೂರು ಇವರಿಂದ ಸಿಹಿ ವಿತರಣೆ.
  • ಉಮಾ ಚಿತ್ರಮಂದಿರದಲ್ಲಿ 2 ಗಂಟೆ ಆಟಕ್ಕೆ ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಅಪ್ಪು" ಭಾವಚಿತ್ರಕ್ಕೆ ಟಿ.ಎಂ. ಚಂದ್ರಶೇಖರ್‌ ಮತ್ತು ಸ್ನೇಹಿತರಿಂದ ಭಾರಿ ಭಾರಿ ಹೂವಿನ ಹಾರ ಹಾಗೂ ಡಾ. ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಶಂಕರೇಗೌಡ ಮತ್ತು ಸ್ನೇಹಿತರು ಉಮಾ ಚಿತ್ರಮಂದಿರದಲ್ಲಿ ಅಪ್ಪು ಚಿತ್ರದ ಪಣವಿಡು ಹಾಡಿನ ದೃಶ್ಯಕ್ಕೆ ಕಾಸಿನ ಸುರಿಮಳೆ ಹಾಗೂ ಪುನೀತ್‌ ರಾಜ್‌ಕುಮಾರವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ, ಭಾರೀ ಹೂವಿನ ಹಾರ, ಪಟಾಕಿ ಸಿಡಿಸಿ, ಸಿಹಿ ಸಮಾರಾಧನೆ.
  • ಮೈಸೂರಿನ ಪ್ರಭಾ ಚಿತ್ರಮಂದಿರದಲ್ಲಿ ಡಾ. ರಾಜ್‌ ಹಾಗೂ ಮಕ್ಕಳ ಅಭಿಮಾನಿ ಚರಮಂತ್ರಿಯವರಿಂದ ಬೆಳಗಿನ ಪ್ರದರ್ಶನಕ್ಕೆ - ಅಶ್ವಮೇಧ ಹೋಟೆಲ್‌, ಓಲ್ಡ್‌ ಬ್ಯಾಂಕ್‌ ರಸ್ತೆ, ಮೈಸೂರು ಇಲ್ಲಿ ಇಡ್ಲಿ, ವಡೆ, ಸಾಂಬಾರ್‌, ದೋಸೆ ಹಾಗೂ ಕಾಫಿ ಉಚಿತ ವಿತರಣೆ .
  • ಅಪ್ಪು ಚಿತ್ರ ಪ್ರದರ್ಶಿತವಾಗುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹೂವಿನ ಹಾರ ಹಾಗೂ ನಕ್ಷತ್ರಗಳ ಮೆರವಣಿಗೆ ಮಾಡುವರು.

ಇಷ್ಟೆಲ್ಲ ಸಂಭ್ರಮದ ನಂತರದ ಉಳಿಯುವ ಪ್ರಶ್ನೆ ಅಪ್ಪು ಗೆಲ್ಲುತ್ತಾನಾ? ಅನುಮಾನವಿಲ್ಲ ಎನ್ನುತ್ತಿದ್ದಾರೆ ರಾಜ್‌ ಅಭಿಮಾನಿಗಳು.

English summary
Sandalwood Rajkumar family Fans Celebrate Appu Film release in Mysore and bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada