For Quick Alerts
ALLOW NOTIFICATIONS  
For Daily Alerts

ಭರತನಾಟ್ಯ, ಕಥಕ್ಕಳಿ ಕಲಿತಿರುವ ರಕ್ಷಿತಾ ಅರಂಗೇಟ್ರಂ ಅಪ್ಪು ಮೂಲಕ ಆಗಿದೆ.

By Super
|

ನಗಬೇಕಮ್ಮಾ ನಗಬೇಕು ಎಲ್ಲರ ನಗಿಸುತಲಿರಬೇಕು !

ನವ ನಾಯಕಿ ರಕ್ಷಿತಾಗೆ ಪೂರಿ ಜಗನ್ನಾಥ್‌ ಪದೇಪದೇ ಈ ಮಾತು ಹೇಳಿದ್ದರು. ಯಾಕೆಂದರೆ, ರಕ್ಷಿತಾಗೆ ನಗೋದು ಕಷ್ಟ, ಅಳೋದು ಇಷ್ಟ. ಅಳುವಿನಲ್ಲಿ ಪಂಚ್‌ ಇರುತ್ತದೆ, ಭಾವ ಬಯಲಾಗುತ್ತದೆ. ನಟಿಸಲೆಂದು ನಗುವುದು ಎಷ್ಟೋ ಸಲ ನಗೆಪಾಟಲು...

ಏಪ್ರಿಲ್‌ 26ರಂದು ತೆರೆ ಕಂಡಿರುವ ಅಪ್ಪು ನಾಯಕಿ ರಕ್ಷಿತಾ ಮಾತುಗಳಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ವ್ಯಕ್ತ. ಆಕೆಯ ಮಾತುಗಳು, ಅವುಗಳ ನಡುವಿನ ವ್ಯಾಕ್ಯುಮ್‌ ಅದಕ್ಕೆ ಹಿಡಿದ ಕನ್ನಡಿ. ಐದಡಿ ನಾಲ್ಕಿಂಚಿನ ರಕ್ಷಿತಾ ನಗುಮುಖದ ಹುಡುಗಿ. ಸಿನಿಮಾ ನಂಟು ಆಕೆಗೆ ರಕ್ತಗತವಾಗಿ ಬಂದದ್ದು. ಅಮ್ಮ ಮಮತಾ ರಾವ್‌ ಒಂದಾನೊಂದು ಕಾಲದಲ್ಲಿ ಕಿರುತೆರೆ, ಸಿನಿಮಾಗಳಲ್ಲಿ ಮೆರೆದವರು. ಅಪ್ಪ ಗೌರೀಶಂಕರ್‌ ಬಿ.ಸಿ.ಗೌರೀಶಂಕರ್‌ ಪ್ರಸಿದ್ಧ ಸಿನಿ ಛಾಯಾಗ್ರಾಹಕರು. ಹೀಗಿದ್ದೂ ಅಪ್ಪುವಿನ ಮೊದಲ ಶಾಟ್‌ ಎದುರಿಸುವಾಗ ರಕ್ಷಿತಾಗಿ ತುಂಬಾ ಗಾಬರಿಯಾಗಿತ್ತಂತೆ. ಪೂರಿ ಜಗನ್ನಾಥ್‌ಗೆ ಒಂದೇ ಟೇಕ್‌ಗೆ ಶಾಟ್‌ ಓಕೆ ಅಂದಾಗ, ರಕ್ಷಿತಾಗೆ ಏನನ್ನೋ ಸಾಧಿಸಿದ ಖುಷಿ.

ಅಪ್ಪು ಥೇಟ್‌ ಅಪ್ಪನ ತರಹ. ನಟನೆ, ಸ್ವಭಾವ, ಸಹಕಾರ ಎಲ್ಲದರಲ್ಲೂ ಗ್ರೇಟ್‌. ಸುದೀಪ್‌ ನನ್ನ ಗೆಳೆಯ. ಹುಚ್ಚ ಚಿತ್ರವನ್ನು ಹುಚ್ಚಿಯಂತೆ ನೋಡಿದ್ದೇನೆ. ನಾನು ನಾಯಕಿಯಾಗುವ ಚಿತ್ರಗಳಲ್ಲೆಲ್ಲಾ ಅವರನ್ನೇ ನಾಯಕನಾಗಿ ಕಲ್ಪಿಸಿಕೊಂಡು ಖುಷಿ ಪಟ್ಟಿರುವುದೂ ಉಂಟು. ಸುದೀಪ್‌ ಜೊತೆ ನಟಿಸುವುದು ನನ್ನ ಕನಸಾಗಿತ್ತು. ಧಮ್‌ ಮೂಲಕ ಅದು ನನಸಾಗಿದೆ. ಹಾಗೆಯೇ ರವಿಚಂದ್ರನ್‌ ಜೊತೆ ನಟಿಸುವ ಆಸೆಯೂ ಇದೆ. ನಾನು ನೋಡಿದ ಮೊದಲ ಚಿತ್ರ ಪ್ರೇಮಲೋಕ. ಆರ್ಟ್‌ ಸಿನಿಮಾ ನೋಡೋದು ನಂಗಿಷ್ಟ. ಆದರೆ, ಯಾಕೋ ಲಗಾನ್‌ ನನಗೆ ಹಿಡಿಸಲಿಲ್ಲ....

ಕೆಎಸ್‌ಸಿಎ ಕ್ಲಬ್‌ನಲ್ಲಿ ಕರೆದಿದ್ದ ಔತಣಕೂಟದಲ್ಲಿ ರಕ್ಷಿತಾ ಪಟಪಟನೆ ಮಾತಾಡುತ್ತಿದ್ದಳು. ಆಕೆಯ ಮಾತಲ್ಲಿ ಆತ್ಮವಿಶ್ವಾಸ ಭರಪೂರ. ಅಣ್ಣಾವ್ರ ಕುಟುಂಬಕ್ಕೆ ಈಕೆ ಹಳಬಳು. ಚಿಕ್ಕಂದಿನಲ್ಲೇ ಅವರ ಮನೆಗೆ ಹೋಗಿ, ಬರುತ್ತಿದ್ದುದುಂಟು. ಆಮೇಲೆ ಒಂದು ಕಾಲು ಮುಂಬಯಿಯಲ್ಲಿ, ಒಂದು ಕಾಲು ಬೆಂಗಳೂರಲ್ಲಿ ಅನ್ನುವಂತಾಯಿತು. ಈ ಕಾರಣಕ್ಕೇ ರಕ್ಷಿತಾಗೆ ಮರಾಠಿ, ಹಿಂದಿ, ಗುಜರಾತಿ ಭಾಷೆಗಳೂ ಗೊತ್ತು. ಮಹಾವೀರ್‌ ಜೈನ್‌ ಕಾಲೇಜಿನಲ್ಲಿ ಬಿಸಿಎ ಮಾಡುತ್ತಿದ್ದ ರಕ್ಷಿತಾಗೆ ತಾನು ನಟಿಯಾಗಬೇಕು ಅನ್ನುವ ಇರಾದೆಯೇ ಇರಲಿಲ್ಲ. ಆರು ತಿಂಗಳ ಹಿಂದೆ ಅಪ್ಪುಗೆ ಆಫರ್‌ ಬಂದಾಗ, ಕಾಲೇಜು ಬಿಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದುಂಟು. ಕೊನೆಗೆ ಅಪ್ಪುವನ್ನು ಒಪ್ಪಿದಳು. ಕಾಲೇಜಿಗೆ ಟಾಟಾ ಮಾಡಿದಳು. ಆದರೂ ಓದನ್ನು ಬಿಟ್ಟಿಲ್ಲ. ಎಕ್ಸ್‌ಟರ್ನಲ್‌ ಬಿಎ ಮಾಡುತ್ತಿದ್ದಾಳೆ.

ರಕ್ಷಿತಾ ಕಣ್ಣು ತುಂಬಿ ಬಂದ ಕ್ಷಣಗಳು....

ಕಾಲೇಜಿಗೆ ಟಾಟಾ ಹೇಳಿದಾಗ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಹೊಗಳಿ ಆಶೀರ್ವದಿಸಿದಾಗ, ರಕ್ಷಿತಾ ಕಣ್ಣಾಲಿಯಲ್ಲಿ ನೀರು. ಅಪ್ಪು ಸೆಟ್‌ನಲ್ಲಿ ಮೊದಲ ಬಾರಿ ಕೆಮೆರಾ ಎದುರಿಸುವ ಮುನ್ನ ಅಪ್ಪಾಜಿ ನೋಡಿ, ಏನಮ್ಮಾ ಇಷ್ಟು ಬೆಳೆದುಬಿಟ್ಟಿದ್ದೀಯಾ ಅಂತ ಬೆನ್ನು ತಣ್ಣಿದಾಗಲೂ ತುಟಿಗಳು ಬಿಗಿದುಕೊಂಡದ್ದು ನಿಜ.

ಅಪ್ಪುವಿನ ತೆಲುಗು ರೀಮೇಕ್‌ನಲ್ಲೂ ರಕ್ಷಿತಾ ನಾಯಕಿ. ರವಿತೇಜ್‌ ಅದರ ನಾಯಕ. ಹಿಂದಿಯಲ್ಲಿ ನಟಿಸುವುದು ಈಕೆಯ ಕನಸು. ಸುದೀಪ್‌ ನಾಯಕ ನಟನಾಗಿರುವ ಧಮ್‌ ಚಿತ್ರೀಕರಣದಲ್ಲೀಗ ರಕ್ಷಿತಾ ಬ್ಯುಸಿ. ಅಂದಹಾಗೆ, ಈಕೆಯ ನಿಜನಾಮ ಶ್ವೇತಾ. ತನಗೆ ರಕ್ಷಿತಾ ಎಂಬ ಒಳ್ಳೆಯ ಹೆಸರನ್ನಿಟ್ಟ ಪಾರ್ವತಮ್ಮ ಈಕೆಯ ಗಾಡ್‌ಮದರ್‌ಗಳಲ್ಲಿ ಒಬ್ಬರು. ಇನ್ನೊಬ್ಬಾಕೆ ಅಮ್ಮ ಮಮತಾ ರಾವ್‌!

English summary
Rakshitha : New heroine of Sandalwood

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more