200ರ ಹೊಸ್ತಿಲಲ್ಲಿ ‘ಎಕ್ಸ್ ಕ್ಯೂಸ್‌ಮಿ’

100 ದಿನಗಳನ್ನು ದಾಟಿದ ಮೇಲೆ ಕೆಲ ದಿನ ಚಿತ್ರದ ಗಳಿಕೆಯಲ್ಲಿ ಸ್ವಲ್ಪ ಇಳಿಮುಖ ಕಂಡರೂ ಆ ಮೇಲೆ ಮತ್ತೆ ಚೆತರಿಸಿಕೊಂಡು 200 ದಿನದತ್ತ ಚಿತ್ರ ದಾಪುಗಾಲು ಹಾಕುತ್ತಿದೆ. ಎಂ.ಎನ್. ಸುರೇಶ್ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು ಮೊದಲ ಪ್ರಯತ್ನವೇ ಫಲಕಾರಿಯಾಗಿದೆ. ಚಿತ್ರದ ನಾಯಕ, ಹೊಳಪುಗಣ್ಣಿನ ಹುಡುಗ ಸುನಿಲ್ ರಾವ್‌ನಲ್ಲಿ ಹುದುಗಿದ ಪ್ರತಿಭೆಗೆ ನಿಜವಾದ ಬೆಲೆ ದೊರೆತಿದೆ.
ನಿರ್ಮಾಪಕ ಎಂ.ಎನ್. ಸುರೇಶ್ ಅವರ ಹೊಸ ಹುಡುಗರನ್ನು ಹಾಕಿ ಚಿತ್ರ ಮಾಡಿದರೆ ಗೆಲ್ಲುತ್ತೇವೆಂಬ ಮಾತಿಗೆ ಸಾಕ್ಷಿ ದೊರೆತಿದೆ. ಎಂ.ಎನ್. ಸುರೇಶ್ ನಾಗಣ್ಣ ಅವರ ನಿರ್ದೇಶನದ 'ಚಪ್ಪಾಳೆ" ಎಂಬ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೊಸ ನಟರನ್ನೇ ಹಾಕಿಕೊಂಡು ಸುರೇಶ್ 'ಚಪ್ಪಾಳೆ" ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ. ಅವರು ಗೆಲ್ಲಲಿ.
ಸುನಿಲ್ ರಾವ್‌ರಂಥಹ ಹೊಸ ಪ್ರತಿಭೆಗಳು ಬೆಳಕಿಗೆ ಬರಲಿ. ಕನ್ನಡ ಚಿತ್ರರಂಗದಲ್ಲೀಗ ನಟರಿಗೇನೂ ಕೊರತೆಯಿಲ್ಲ; ಪ್ರತಿಭಾವಂತ ನಟರು ಮಾತ್ರ ವಿರಳವಾಗಿದ್ದಾರೆ. ಸುರೇಶ್ ಅಂಥವರಿಂದಲಾದರೂ ಪ್ರತಿಭಾನ್ವಿತರು ಬೆಳಕಿಗೆ ಬರಲಿ ಎಂದು ಹಾರೈಸೋಣ.


Click it and Unblock the Notifications