»   » ಮೈ ಆಟೋಗ್ರಾಫ್‌-100 : ಸುದೀಪ್‌ ನಾಟ್‌ ಔಟ್‌!

ಮೈ ಆಟೋಗ್ರಾಫ್‌-100 : ಸುದೀಪ್‌ ನಾಟ್‌ ಔಟ್‌!

Posted By:
Subscribe to Filmibeat Kannada

ನೀವು ಸರೋವರ್‌ ಹೋಟೆಲ್‌ನಲ್ಲಿ ಕಿಚ್ಚ(ಸುದೀಪ್‌)ನನ್ನು ನೋಡಬೇಕಿತ್ತು. ಅವನ ಮುಖದಲ್ಲಿ ಖುಷಿ... ಮನಸ್ಸಿನಲ್ಲಿ ಖುಷಿ... ಎಲ್ಲವೂ ಖುಷಿಮಯಂ. ಅಲ್ಲಿನ ಖುಷಿ ಪಾರ್ಟಿಗೆ ಕಾರಣವಾಗಿದ್ದು; ‘ಮೈ ಆಟೋಗ್ರಾಫ್‌’ನ ಗೆಲುವು.

ಸೋಲಿನ ಸರಣಿಯನ್ನು ಸುದೀಪ್‌ ತುಂಡರಿಸಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ‘ಮೈ ಆಟೋಗ್ರಾಫ್‌’ ಗೆದ್ದಿದೆ. ಬಿಡುಗಡೆಯಾದ ಬಹುತೇಕ ಚಿತ್ರಮಂದಿಗಳಲ್ಲಿ ಶತಕ ಪೂರೈಸಿ, ಮುನ್ನಡೆದಿದೆ. ಆ ಮೂಲಕ ಸುದೀಪ್‌ ಶ್ರಮಕ್ಕೆ ಪ್ರತಿಫಲ ಕೊಡಮಾಡಿದೆ.

ಚಿತ್ರ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಐವತ್ತು ದಿನ ಪೂರೈಸಿದ್ದು ಇನ್ನೊಂದು ಹೆಗ್ಗಳಿಕೆ. ಅದಕ್ಕೂ ಮುಖ್ಯವಾದ ಸಂಗತಿ ಅಂದ್ರೆ, ಇದು ಈ ವರ್ಷ ಯಶಸ್ಸು(100 ದಿನದ ಪ್ರದರ್ಶನ) ಕಂಡ ಮೊದಲ ಚಿತ್ರ.

ಈ ಖುಷಿಯನ್ನು ಹಂಚಿಕೊಳ್ಳಲು ಸುದೀಪ್‌ ಅಂದು ಸರೋವರ್‌ ಹೋಟೆಲ್‌ನಲ್ಲಿ ನಿಂತಿದ್ದರು. ‘ಎಷ್ಟು ದಿನವಾಗಿತ್ತು ಇಂತಹ ಸೆಂಚುರಿ ಸುಖ ಅನುಭವಿಸಿ. ಯಾವ ಫಾರ್ಮುಲ ಉಪಯೋಗಿಸಿದರೂ ಗೆಲುವು ನನಗೆ ಒಲಿದಿರಲಿಲ್ಲ. ‘ಆಟೋಗ್ರಾಫ್‌’ ಸೋತಿದ್ದರೆ, ನಾನು ಮನೆ ಕಳೆದುಕೊಳ್ಳುತ್ತಿದ್ದೆ... ಎಲ್ಲವೂ ಈಗ ಸರಿಯಾಗಿದೆ.’ ಎಂದು ಭಾವುಕರಾದರು.

ಸುದೀಪ್‌ ಮತ್ತೆ ಹೊಸ ಚಿತ್ರಗಳತ್ತ ಗಮನಹರಿಸಿದ್ದಾರೆ. ಎಲ್ಲವೂ ರೀಮೇಕ್‌ ಚಿತ್ರಗಳೇ. ಅವರ ಮುಂದಿನ ಚಿತ್ರ ಅಂಬರೀಷ್‌ ಜೊತೆ. ಅದು ‘ಸರ್ಕಾರ್‌’ ಮತ್ತು ‘ಗಾಢ್‌ಫಾದರ್‌’ ಚಿತ್ರಗಳ ಕೊಲಾಜ್‌. ಆ ಚಿತ್ರ ಮುಗಿದ ಮೇಲೆ ವಿಷ್ಣು ಜೊತೆ. ಅದು ಇನ್ನೊಂದು ರೀಮೇಕ್‌(ಚೇರನ್‌ರ ‘ತವಮೈ ತವಮಿರಂದು’) ಚಿತ್ರ.

Post your views

‘ಮೈ ಆಟೋಗ್ರಾಫ್‌’ : ಪ್ರೀತಿಯ ಮೆರವಣಿಗೆಗೆ ನೆನಪುಗಳ ದಿಬ್ಬಣ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada