»   » ರೆಹಮಾನ್‌ ಮ್ಯಾಜಿಕ್‌ : ತಾಜ್‌ ನಂ.1 ವಂಡರ್‌ ಆಗುವುದೇ?

ರೆಹಮಾನ್‌ ಮ್ಯಾಜಿಕ್‌ : ತಾಜ್‌ ನಂ.1 ವಂಡರ್‌ ಆಗುವುದೇ?

Subscribe to Filmibeat Kannada


ಆಗ್ರಾ : ತಾಜ್‌ಮಹಲನ್ನು ವಿಶ್ವದ ಏಳು ಅದ್ಭುತಗಳ ಪಟ್ಟಿಯಲ್ಲಿ ಮೊದನೆಯದನ್ನಾಗಿ ಮಾಡಲು ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಕಸರತ್ತು ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ರೆಹಮಾನ್‌ ಸಂಗೀತದ ಹೊಸ ಆಲ್ಬಂ ಹೊರತರಲಿದ್ದಾರೆ. ಪ್ರೇಮದ ಸಂಕೇತವಾದ ತಾಜ್‌ಮಹಲ್‌ನ ಆವರಣದಲ್ಲಿ ಇದಕ್ಕಾಗಿ ಚಿತ್ರೀಕರಣವೂ ಆರಂಭವಾಗಿದೆ.

ಸ್ವಿಸ್‌ ಸಂಸ್ಥೆ ‘ನ್ಯೂ ಸೆವೆನ್‌ ವಂಡರ್ಸ್‌ ಆಫ್‌ ದಿ ವರ್ಲ್ಡ್‌’ ಪಟ್ಟಿಯಲ್ಲಿ ತಾಜ್‌ಮಹಲ್‌ನ ಹೆಸರನ್ನೂ ಸೇರಿಸಿದೆ. ತಮ್ಮ ಆಲ್ಬಂ ಮೋಡಿಯಿಂದ, ಈ ಏಳರ ಪಟ್ಟಿಯಲ್ಲಿ ತಾಜ್‌ಮಹಲನ್ನು ಮೊದಲನೆಯದಾಗಿಸುವಲ್ಲಿ ರೆಹಮಾನ್‌ ಯಶಸ್ವಿಯಾಗುವರೇ ಎಂಬುದು ಸದ್ಯದ ಕುತೂಹಲ.

ಕನ್ನಡ ವರ್ಷನ್‌ಗೆ ಕಲ್ಯಾಣ್‌ ಸಾಹಿತ್ಯ!!

ಕನ್ನಡದ ಪ್ರೇಮ ಕವಿ ಕೆ. ಕಲ್ಯಾಣ್‌ ಅವರಿಗೆ ಕನ್ನಡ ಆವೃತ್ತಿಗೆ ಸಾಹಿತ್ಯ ಒದಗಿಸುವಂತೆ ಎ.ಆರ್‌.ರೆಹಮಾನ್‌ ಕೇಳಿದ್ದಾರೆ. ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬರುತ್ತಿರುವ ಈ ಗೀತೆಗಳ ರಾಗ ಸಂಯೋಜನೆ ಎ.ಆರ್‌ ರೆಹಮಾನ್‌ ಸ್ಟುಡಿಯೋದಲ್ಲಿ ಸಾಗುತ್ತಿದೆ. ವಿಶೇಷವೆಂದರೆ ಈ ಆಲ್ಬಂನಲ್ಲಿರುವ ಗೀತೆಗಳನ್ನು ಸ್ವತಃ ರೆಹಮಾನ್‌ ಅವರೇ ಬರೆದಿದ್ದಾರೆ. ತಾಜ್‌ಗೆ ಮತನೀಡಿ ಎಂಬ ಸಂದೇಶದೊಂದಿಗೆ ಹಾಡುಗಳು ಮೂಡಿಬರಲಿವೆ.

ಮೊಘಲ್‌ ಚಕ್ರವರ್ತಿ ಶಹಜಹಾನ್‌ ಹಾಗೂ ಆತನ ಹೆಂಡತಿ-ಜೀವನಪ್ರೀತಿ ಮುಮ್ತಾಜ್‌ಳ ಆಧ್ಯಾತ್ಮಿಕ ರಮ್ಯ ಸಂಬಂಧವನ್ನು, ಕಣ್ಣಿಗೆ ಕಟ್ಟುವಂತಹ ದೃಶ್ಯಾವಳಿಗಳ ಚಿತ್ರೀಕರಣ ಭರದಿಂದ ಸಾಗಿದೆ. ಕಾಚ್‌ಪುರ, ಮೆಹ್ತಾಬ್‌ಬಾಗ್‌ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada