ಗಣೇಶನ ಹಬ್ಬಕ್ಕೆ ರವಿ- ಹಂಸ್‌ ಕಡುಬು

By Super

ರಾಕ್‌ಲೈನ್‌ ಸ್ಟುಡಿಯೋದಲ್ಲಿ ತಲೆಯೆತ್ತಿ ನಿಂತಿರುವ ಅದ್ಧೂರಿ ಬಂಗಲೆಗಳನ್ನು ನೋಡಿದರೆ, ನಾನೀಗ ಧೀರನಲ್ಲ ಅಂತ ವೆಂಕಟೇಶ್‌ ಹೇಳಿಕೊಳ್ಳುತ್ತಿರುವುದು ಸುಳ್ಳೆನೆಸುತ್ತೆ. ರವಿಚಂದ್ರನ್‌- ಹಂಸಲೇಖ ನಡುವೆ ಮುರಿದಿದ್ದ ಸಂಬಂಧಕ್ಕೆ ಕೊಂಡಿಯಾದ ಖುಷಿಯಲ್ಲಿ ರಾಕ್‌ ಉತ್ಸಾಹ ಇಮ್ಮಡಿಯಾಗಿದೆ.

ರವಿ- ಹಂಸ್‌ ಒಂದಾದ ಸಂತೋಷದಲ್ಲಿ 'ಒಂದಾಗೋಣ ಬಾ" ಚಿತ್ರೀಕರಣ ರಾಜಧಾನಿ ಎಕ್ಸ್‌ಪ್ರೆಸ್‌ನಷ್ಟು ಜೋರಾಗಿದೆ. ಸಿನಿಮಾ ಕೂಡ 'ಡಕೋಟ ಎಕ್ಸ್‌ಪ್ರೆಸ್‌" ಥರ ಓಡುತ್ತೆ ನೋಡಿ ಅಂತ ನಗುತ್ತಾರೆ ರವಿ. ರವಿ- ಹಂಸ್‌ ಕಾಂಬಿನೇಷನ್ನಿನ ಹಳೆಯ ಚಿತ್ರಗಳಲ್ಲಿದ್ದ ಸೆಟ್‌ಗಳ ಸೆಳಕು ಈಗ ಮರು ಕಳಿಸಿದೆ. ನಿರ್ಮಾಣದ ಶ್ರೀಮಂತಿಕೆಯಲ್ಲಿ ರಾಕ್‌ಲೈನ್‌ ಕಿಂಚಿತ್ತೂ ಜುಗ್ಗರಾಗಿಲ್ಲ. ದುಡ್ಡು ಕಾಸು ವ್ಯವಹಾರ ನೋಡಿಕೊಳ್ಳುತ್ತಿರುವ ಕೆ.ಪಿ.ಮಂಜಯ್ಯಕೂಡ 'ಒಂದಾಗೋಣ.." ತಂಡದೊಟ್ಟಿಗೆ ಒಂದಾಗಿ ಕೊಡುಗೈ ಪ್ರಭುವಂತೆ ಕಾಣುತ್ತಿದ್ದಾರೆ.

ಕಬ್ಬಿಣ ಚೆನ್ನಾಗಿ ಕಾದಿರುವಾಗ ಬೇಕಾದ ಆಕಾರಕ್ಕೆ ತಂದುಕೊಳ್ಳದಿದ್ದರೆ ಕಳಕೊಳ್ಳೋನು ತಾನೇ ಎಂಬ ಜಾಯಮಾನದ ರಾಕ್‌ಲೈನ್‌ 'ಒಂದಾಗೋಣ ಬಾ" ಮುಗಿಸುವ ಆತುರದಲ್ಲಿದ್ದಾರೆ. ಇದು ಗಣೇಶನ ಹಬ್ಬಕ್ಕೆ ಪ್ರೇಕ್ಷಕರಿಗೆ ನನ್ನ ಗಿಫ್ಟ್‌ ಎಂದಷ್ಟೇ ಹೇಳುವ ರಾಕ್‌ಲೈನ್‌ ಸೆಟ್ಟಿನಲ್ಲಿ ಒಂದಾಗಿ ಹೋಗುತ್ತಾರೆ. ಒಂದಾದವರ ಖುಷಿಯ ನಡುವೆ ಹೆಚ್ಚು ಮಾತಾಡಲು ಅವರಿಗೆ ಪುರುಸೊತ್ತಿಲ್ಲ.

ತೆಲುಗಿನಲ್ಲಿ ಪ್ರಶಸ್ತಿಗಳನ್ನು ದೋಚಿದ 'ಕಲಿಸುಂದಾಂ ರಾ" ಚಿತ್ರದ ರೀಮೇಕು 'ಒಂದಾಗೋಣ ಬಾ". ತೆಲುಗಿನ ಮೂಲ ನಿರ್ದೇಶಕ ಉದಯ ಶಂಕರ್‌ ಅವರಿಗೇ ಕನ್ನಡ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಲಾಗಿದೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕತೆಯನ್ನು ಹೊಂದಿಸಿಕೊಂಡು, ಅವರೇ ಚಿತ್ರಕತೆಗೆ ತಿದ್ದುಪಡಿ ತಂದಿದ್ದಾರೆ.

ಕೋಟಗಾನಹಳ್ಳಿ ರಾಮಣ್ಣ ಸಂಭಾಷಣೆ ಬರೆದಿದ್ದು, ಇಸ್ಮಾಯಿಲ್‌ ಕಲೆ ಕುಸುರಿ ಕೆಲಸ ಮಾಡಿದ್ದಾರೆ. ಉದಯ ಶಂಕರ್‌ ಸಹಾಯಕ್ಕೆ ಸೋಮರಾಜ್‌- ಸಾಹುರಾಜ್‌ ನಿಂತಿದ್ದಾರೆ. ಪಂಬಲ್‌ ರವಿ ಡುಶುಂ ಡುಶುಂ ಹೇಳಿಕೊಡಲಿದ್ದು, ಕೆ.ಪಿ.ಮಂಜಯ್ಯ ನಿರ್ಮಾಣ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

ಹಂಸ್‌-ರವಿಯ ಕೊಂಡಿ ಕಳಚುವ ಮುಂಚೆ ತೆರೆಕಂಡ ಕೊನೆ ಚಿತ್ರ 'ಪ್ರೀತ್ಸೋಣ ಬಾ"ದ ಯಶಸ್ವಿ ನಾಯಕಿ ಶಿಲ್ಪ ಶೆಟ್ಟಿ ಚಿತ್ರದ ಸೆಳಕು. ತೆಲುಗು ಗಂಧದ ಹಿರೀಕ ಸೋಮಯಾಜುಲು, ಕನ್ನಡ ಚಿತ್ರಗಳಿಂದ ಅಲ್ಪ ವಿರಾಮ ಪಡೆದಿದ್ದ ಚರಣ್‌ರಾಜ್‌, ಕೆ.ಆರ್‌.ವಿಜಯಾ, ಹೆಸರಿಗೆ ತಕ್ಕ ದೊಡ್ಡಣ್ಣ , ಶಾಶ್ವತ ಸಿಎಂ ಮುಖ್ಯಮಂತ್ರಿ ಚಂದ್ರು, ಬೋರು ಹೊಡೆಸಿದರೂ ಆಗಾಗ ನೆನಪಾಗುವ ಶಿವರಾಂ, ಅಪರೂಪ ಎಂಬಂತೆ ಸುಂದರ ರಾಜ್‌ ದಂಪತಿಗಳು, ಧಾರಾವಾಹಿಯಲ್ಲಿ ಕಳೆದು ಹೋಗುತ್ತಿದ್ದ ಪವಿತ್ರಾ ಲೋಕೇಶ್‌, ನಾಯಕಿ ಸ್ಥಾನದಿಂದ ನಿವೃತ್ತರಾಗಿರುವ ತಾರಾ ಹಾಗೂ ವನಿತಾವಾಸು, ಹೊನ್ನಪ್ಪ ಭಾಗವತರ್‌ ಕೂಸು ಭರತ್‌ ಭಾಗವತರ್‌ ಮೊದಲಾದವರು 'ಒಂದಾಗೋಣ ಬಾ" ಅಂತಿದಾರೆ.

ಗಣೇಶನ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗೋದು ಗ್ಯಾರಂಟಿ ಅಂತೆ.

English summary
Rockline is not counting pennies to spend on Ravichandran and Hamsalekha combination movie Ondagona Baa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X