»   » ರವಿಚಂದ್ರನ್ ಸಿನಿಮಾದಲ್ಲಿ ವೆಂಕಟೇಶ ಮಹಾತ್ಮೆ!?

ರವಿಚಂದ್ರನ್ ಸಿನಿಮಾದಲ್ಲಿ ವೆಂಕಟೇಶ ಮಹಾತ್ಮೆ!?

Posted By: Staff
Subscribe to Filmibeat Kannada

ತೆಲುಗಿನ ಮೆಗಾಸ್ಟಾರ್ ಚಿರಂಜೀವಿಯನ್ನು ತಮ್ಮ ಸಿಪಾಯಿ ಚಿತ್ರಕ್ಕೆ ಕರೆತಂದು ಸುದ್ದಿ ಮಾಡಿದ್ದ ರವಿಚಂದ್ರನ್, ಈಗ ತೆಲುಗಿನ ಮತ್ತೊಬ್ಬ ಸ್ಟಾರ್ ವೆಂಕಟೇಶ್ ಹಿಂದೆ ಬಿದ್ದಿದ್ದಾರೆ ಎನ್ನುವುದು ಗಾಂಧಿನಗರದಲ್ಲಿ ಸದ್ಯದ ಗುಸುಗುಸು.

ತಮ್ಮ ಗೆಳೆತನವನ್ನು ಬಳಸಿಕೊಂಡು, ಸಂಭಾವನೆಯಲ್ಲಿ ರವಿಚಂದ್ರನ್ ಚೌಕಾಶಿ ಮಾಡಿದ್ದಾರೆ. ರವಿ ಮತ್ತು ಅವರ ಸಹೋದರ ಬಾಲಾಜಿ ಅಭಿನಯಿಸುತ್ತಿರುವ ರಾಜಕುಮಾರಿಚಿತ್ರದಲ್ಲಿ ವೆಂಕಟೇಶ್‌ಗೊಂದು ಮುಖ್ಯಪಾತ್ರವಿದೆಯಂತೆ.

110 ಚಲನಚಿತ್ರಗಳನ್ನು ನಿರ್ಮಾಣ ಮಾಡಿ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಮೆರೆದ ನಿರ್ಮಾಪಕ ರಾಮಾನಾಯ್ಡು, ವೆಂಕಟೇಶ್ ‌ಅವರ ತಂದೆ. ಸಿನಿಮಾ ಮತ್ತು ರಾಜಕಾರಣದಲ್ಲಿ ಅವರು ಸದಾ ಬಿಜಿ. ಇತ್ತ ವೈವಿಧ್ಯಮಯ ಪಾತ್ರಗಳಿಂದ ವೆಂಕಟೇಶ್, ತೆಲುಗು ಚಿತ್ರರಸಿಕರ ಸೂರೆ ಮಾಡಿದವರು. ವಿಕ್ಟರಿ ವೆಂಕಟೇಶ್ ಎಂದೇ ಅವರು ಖ್ಯಾತರು.

ತಮಿಳಿನ ಸುಂದರಿ ಕನಿಹಾ ನಾಯಕಿ ಪಾತ್ರದಲ್ಲಿದ್ದು,ರಾಜಕುಮಾರಿ ಚಿತ್ರದ ನಿರ್ಮಾಪಕ ಕೆ.ಮಂಜು.

English summary
Telugu Super star Venkatesh is ready to act in Kannada Film Rajakumari?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada