For Quick Alerts
  ALLOW NOTIFICATIONS  
  For Daily Alerts

  ತವರಿಗೆ ಲಕ್ಷ್ಮಿಗೋಪಾಲ ಸ್ವಾಮಿ

  By Staff
  |
  • ಅರ್ಧ ಡಜನ್‌ ಮಲಯಾಳಂ ಚಿತ್ರಗಳಲ್ಲಿ , ಒಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸಿರುವ ಕನ್ನಡತಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ಈಗ ಕನ್ನಡ ಮತ್ತು ಕರ್ನಾಟಕ ನೆನಪಾಗಿದೆ! ಜೊತೆಗೆ ಕನ್ನಡವೇ ಸತ್ಯ ಎನ್ನುತ್ತಿದ್ದಾರೆ! -ಅದಕ್ಕೆ ಕಾರಣ, ಅವರೀಗ ‘ವಿಷ್ಣು ಸೇನೆ’ ಚಿತ್ರದ ನಾಯಕಿ. ‘ಪುರ್ವಾಪರ’ ಚಿತ್ರದ ನಂತರ ಕನ್ನಡದತ್ತ ಮುಖ ತಿರುಗಿಸದ ಈಕೆಯನ್ನು ಸ್ಯಾಂಡಲ್‌ವುಡ್‌ಗೆ ಕರೆತರಲು ನಿರ್ಮಾಪಕರು ಪಟ್ಟ ಕಷ್ಟ ಅವರಿಗಷ್ಟೇ ಗೊತ್ತು! ಲಕ್ಷ್ಮಿ ಗೋಪಾಲಸ್ವಾಮಿ ಹೆಸರಾಂತ ಭರತನಾಟ್ಯ ಕಲಾವಿದೆಯೂ ಹೌದು.
  • ಬಹಳ ದಿನಗಳಿಂದ ಭಾರೀ ಕುತೂಹಲ ಕೆರಳಿಸಿರುವ, ರವಿಚಂದ್ರನ್‌ ನಾಯಕನಾಗಿ ಅಭಿನಯಿಸುತ್ತಿರುವ ‘ಪಾಂಡುರಂಗವಿಠಲ’ ಚಿತ್ರದ ಡಿಟಿಎಸ್‌ ರೀರೆಕಾರ್ಡಿಂಗ್‌ ಮುಗಿದು, ಈಗ ಮೊದಲ ಪ್ರತಿ ಸಿದ್ಧವಾಗಿದೆ. ಹಾಸ್ಯ ಪ್ರಧಾನ ಕಥೆಯುಳ್ಳ ಈ ಚಿತ್ರದಲ್ಲಿ ರಂಭಾ, ಪ್ರೇಮಾ ಸೇರಿದಂತೆ ಮೂವರು ನಾಯಕಿಯರಿದ್ದಾರೆ.
  • ಸ್ಪರ್ಶ ಫಿಲ್ಮ್ಸ್‌ರವರ ಚಿತ್ರ ‘ತುಂಟ ತುಂಟಿ’ಯ ಚಿತ್ರೀಕರಣ ಉಡುಪಿಯಲ್ಲೀಗ ಭರದಿಂದ ಸಾಗಿದೆ. ಚರ್ಚೊಂದರಲ್ಲಿ ಚಿತ್ರದ ಪ್ರಮುಖ ದೃಶ್ಯವನ್ನು ನಿರ್ದೇಶಕ ನಾಗೇಂದ್ರಪ್ರಸಾದ್‌ ಚಿತ್ರೀಕರಿಸಿಕೊಂಡರು. 9ನೇ ತರಗತಿಯ ಪೋರ ಮತ್ತು 24ರ ಯುವತಿಯ ನಡುವಿನ ಪ್ರೇಮ ಕಥೆ ಕುತೂಹಲ ಕೆರಳಿಸಿದೆ.
  • ‘ಈಶ’ ಚಿತ್ರದ ಧ್ವನಿ ಸುರುಳಿ ಜುಲೈ ಕಡೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಲಹರಿ ಸಂಸ್ಥೆ ಕೆಸೆಟ್ಟನ್ನು ಹೊರತರುತ್ತಿದ್ದು, ಮುಖ್ಯಮಂತ್ರಿ ಧರ್ಮಸಿಂಗ್‌ ಕ್ಯಾಸೆಟ್‌ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
  • ಚಿತ್ರ ವಿತರಣೆ ಅತ್ಯಂತ ಸವಾಲಿನ ಕೆಲಸ. ಅದನ್ನು ನಿಭಾಯಿಸಿ ಗೆದ್ದವರಲ್ಲಿ ಪಿ.ಎಸ್‌.ಹುತೇಶ್‌ ಕೂಡ ಒಬ್ಬರು. ಸದ್ಯದ ಯಶಸ್ವೀ ಚಿತ್ರಗಳಾದ ‘ಆಕಾಶ್‌’ ಮತ್ತು ‘ಶಾಸ್ತ್ರಿ ’ ಚಿತ್ರಗಳಿಗೆ ಅವರು ಚಿತ್ರದುರ್ಗದ ವಿತರಕರು. ಈಗ ಅವರು ನಿರ್ಮಾಪಕರಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಬೆಳ್ಳಿಬೆಟ್ಟ ’ ಎಂಬ ಈ ಚಿತ್ರ ಜಗದಂಬಾ ಫಿಲ್ಮ್ಸ್‌ ಲಾಂಛನದಲ್ಲಿ ತಯಾರಾಗುತ್ತಿದೆ.
  • ಹನ್ನೆರಡು ದಿನಗಳ ಕಾಲ ನಡೆದ ‘ಸುನಾಮಿ’ ಯ ಚಿತ್ರೀಕರಣ ಮೊದಲ ಹಂತವನ್ನು ಪೂರೈಸಿದೆ. ರಾಜು ಪಟೇಲ್‌ ನಿರ್ಮಿಸುತ್ತಿರುವ ಈ ಚಿತ್ರ ಬೆಂಗಳೂರಿನ ವೈಭವ್‌ ಹೌಸ್‌, ಮಂಚನಬೆಲೆ ಡ್ಯಾಮ್‌, ಸ್ಕೂಲ್‌ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಹಮ್ಮಿಕೊಂಡಿತ್ತು.
  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X