»   » ಪ್ರೇಮ್‌ ಹೇಳಿದಂಗೆ ರಜನಿಕಾಂತ್‌ ಕೇಳ್ತಾರೆ!?

ಪ್ರೇಮ್‌ ಹೇಳಿದಂಗೆ ರಜನಿಕಾಂತ್‌ ಕೇಳ್ತಾರೆ!?

Subscribe to Filmibeat Kannada

ಸುಂಟರಗಾಳಿ ರಕ್ಷಿತಾ ಕೈ ಹಿಡಿಯೋದು ಹೊರತುಪಡಿಸಿದಂತೆ, ಪ್ರೇಮ್‌ ಎರಡು ಕಾರಣಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ಪ್ರೇಮ್‌ರ ಹೊಸ ಚಿತ್ರ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಮುಹೂರ್ತ ಸಮಾರಂಭ(ಆಗಸ್ಟ್‌ 4)ದಲ್ಲಿ ಸ್ಟೈಲ್‌ ಮಾಸ್ಟರ್‌ ರಜನೀಕಾಂತ್‌ ಪಾಲ್ಗೊಳ್ಳುತ್ತಿದ್ದಾರೆ! ಮತ್ತೊಂದು ಕಾರಣವೆಂದರೆ; ರಜನಿ ಮುಂದಿನ ಚಿತ್ರಕ್ಕೆ ಪ್ರೇಮ್‌ ಆ್ಯಕ್ಷನ್‌- ಕಟ್‌ ಹೇಳಲಿದ್ದಾರೆ!

ಹೌದು ‘ಜೋಗಿ’ಚಿತ್ರ ರಜನಿ-ಪ್ರೇಮ್‌ರ ನಡುವೆ ಸೇತುವೆಯಾಗಿಬಿಟ್ಟಿದೆ. ಕನ್ನಡದ ‘ಜೋಗಿ’ ಚಿತ್ರ ನೋಡಿದ ನಂತರ ರಜನಿ, ಈ ಚಿತ್ರವನ್ನು ತಮ್ಮ ಅಳಿಯ ಧನುಷ್‌ಗಾಗಿ ತಮಿಳಿನಲ್ಲಿ ನಿರ್ದೇಶಿಸುವಂತೆ ಪ್ರೇಮ್‌ಗೆ ಆಹ್ವಾನ ನೀಡಿದ್ದರು. ಆದರೆ ಯಾಕೋ ಪ್ರೇಮ್‌ ಒಪ್ಪಲಿಲ್ಲ. ಆದರೆ ರಜನಿ ಮುಂದಿನ ಚಿತ್ರಕ್ಕೆ ಉತ್ತಮ ಕಥೆಯಾಂದನ್ನು ಸಿದ್ಧಪಡಿಸಲು ಇಲ್ಲ ಅನ್ನಲಿಲ್ಲ!

ದಕ್ಷಿಣ ಭಾರತದ ನಂ.1 ತಾರೆಯ ಚಿತ್ರ ನಿರ್ದೇಶಿಸಲು ಪ್ರೇಮ್‌ ತುದಿಗಾಲ ಮೇಲೆ ನಿಂತಿದ್ದಾರೆ. ಈ ಮಧ್ಯೆ ರಜನಿಕಾಂತ್‌ರ‘ಶಿವಾಜಿ’ ತೆರೆಗೆ ಬರಲು ಸಜ್ಜಾಗುತ್ತಿದೆ.

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada