»   » ಡಾಕ್ಟರ್ ಆದ ಜಯಮಾಲಾ ಅವರೇ,ನಿಮ್ಗೆ ಅಭಿನಂದನೆ ರೀ

ಡಾಕ್ಟರ್ ಆದ ಜಯಮಾಲಾ ಅವರೇ,ನಿಮ್ಗೆ ಅಭಿನಂದನೆ ರೀ

Subscribe to Filmibeat Kannada


ಬೆಂಗಳೂರು, ಜುಲೈ 26 : ನಟಿ ಜಯಮಾಲಾ ಮುಖದಲ್ಲೀಗ ಮಂದಹಾಸ! ಅವರ ಖುಷಿಗೆ ಕಾರಣ ಅವರು ಡಾಕ್ಟರ್ ಆದದ್ದು. ಅಂದ ಹಾಗೇ ಅವರಿಗೆ ಯಾವ ವಿಶ್ವವಿದ್ಯಾಲಯವೂ ಗೌರವ ಡಾಕ್ಟರೇಟ್ ನೀಡಿಲ್ಲ. ಅವರು ಸಲ್ಲಿಸಿದ್ದ ಪ್ರಬಂಧಕ್ಕೆ ಈಗ ಪಿಹೆಚ್ ಡಿ ಸಿಕ್ಕಿದೆ.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ.ಎಂ.ಜಿ.ಕೃಷ್ಣನ್ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಸಲ್ಲಿಸಿದ್ದರು. ಅವರು ಆಯ್ದುಕೊಂಡಿದ್ದ ವಿಷಯ :ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆ,ಒಂದು ಅಧ್ಯಯನ.

ಜಯಂತಿ ಹೆಸರಲ್ಲಿ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದಿರುವ ಜಯಮಾಲಾ, ಈಗ ರಾಣಿ ಅಬ್ಬಕ್ಕನ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ ರಾಣಿ ಅಬ್ಬಕ್ಕನ ಸಿನಿಮಾ ತಯಾರಿಸುವ ಹಂಬಲವೂ ಇದೆಯಂತೆ.

ಮಂಗಳೂರು ಹೆಣ್ಣು ಮಗಳಾದ ಜಯಮಾಲಾ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಒಟ್ಟು 75ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿದ್ದಾರೆ.

ತಮ್ಮ 13ನೇ ವಯಸ್ಸಿನಲ್ಲಿ ಕಾಸ್ ದಾಯೆ ಕಂಡನೆ ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಅವರು ಚಲನಚಿತ್ರರಂಗ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada