»   » ರಾಕ್‌ಲೈನ್‌ ಸಾರಥ್ಯದಲ್ಲಿ ತಾರಾ ಬಳಗ-ಕ್ರಿಕೆಟ್‌ ಕಲಿಗಳ ಕ್ರಿಕೆಟ್‌

ರಾಕ್‌ಲೈನ್‌ ಸಾರಥ್ಯದಲ್ಲಿ ತಾರಾ ಬಳಗ-ಕ್ರಿಕೆಟ್‌ ಕಲಿಗಳ ಕ್ರಿಕೆಟ್‌

Posted By: Staff
Subscribe to Filmibeat Kannada

ವಿಷ್ಣುವರ್ಧನ್‌ ಲೆಫ್ಟ್‌ ಹ್ಯಾಂಡೆಡ್‌ ಬ್ಯಾಟ್ಸ್‌ಮನ್ನಾ ? ಮುಖ ಮುಚ್ಚುವ ಕೂದಲು ಹೊತ್ತ ಉಪ್ಪಿಗೆ ಬೌಲಿಂಗ್‌ ಮಾಡೋಕೆ ಬರುತ್ತಾ?...

ಈ ಪ್ರಶ್ನೆಗಳಿಗೆ ಉತ್ತರ ತಾರಾ ಬಳಗ ವರ್ಸಸ್‌ ಹಳೆಯ ಕ್ರಿಕೆಟಿಗರ ಕ್ರಿಕೆಟ್‌ ಕಾಳಗದಲ್ಲಿ ಸಿಗಲಿದೆ. ಆಗಸ್ಟ್‌ 18ನೇ ತಾರೀಖು ಚಿನ್ನಸ್ವಾಮಿ ಸ್ಟೇಡಿಯಂ ಬುಕ್ಕಾಗಿದೆ. ಹೊನಲು ಬೆಳಕಿನಲ್ಲಿ ತಾರೆಗಳ ಕ್ರಿಕೆಟ್‌ ಗಮಲು. ವಿಷ್ಣುವರ್ಧನ್‌, ರವಿಚಂದ್ರನ್‌, ಉಪೇಂದ್ರ, ಪುನೀತ್‌, ಶಿವಣ್ಣ, ಸುದೀಪ್‌, ರಾಕ್‌ಲೈನ್‌ ಮೊದಲಾದ ತಾರೆಗಳದ್ದು ಒಂದು ತಂಡ. ಜ್ರಿಜೇಶ್‌ ಪಟೇಲ್‌, ಜಿ.ಆರ್‌.ವಿಶ್ವನಾಥ್‌ರಂಥಾ ಹಳೆಯ ಕ್ರಿಕೆಟ್‌ ಹುಲಿಗಳದ್ದು ಇನ್ನೊಂದು ತಂಡ. ನಟಿ ಪ್ರೇಮಾ ಕೂಡ ಈಗಾಗಲೇ ಚೆಂಡನ್ನು ಕೈಗೆತ್ತಿಕೊಂಡು ನನಗೂ ಬೌಲಿಂಗ್‌ ಮಾಡೋಕೆ ಬರುತ್ತೆ ಅಂತ ಖದರು ತೋರಲು ನಿಂತಿದ್ದಾರೆ. ಎಷ್ಟೇ ಆದರೂ ಅವರ ತಮ್ಮ ಅಯ್ಯಪ್ಪ ಕ್ರಿಕೆಟಿಗ ಅಲ್ಲವೇ?

ಅಂದಹಾಗೆ, ಯಾರು ಬೇಕಾದರೂ ಈ ಕ್ರಿಕೆಟ್ಟನ್ನು ನೋಡಲು ಬರಬಹುದು. ಟಿಕೆಟ್ಟಿಲ್ಲ. ಹಾಗಂತ ಪ್ರವೇಶ ಬಿಟ್ಟಿ ಅಲ್ಲ. 'ನಾಗರಹಾವು" ಚಿತ್ರದ ಒಂದು ಆಡಿಯೋ ಕೆಸೆಟ್‌ ಖರೀದಿಸುವುದು ಕಡ್ಡಾಯ. ಕೆಸೆಟ್‌ ಕೊಳ್ಳಿ, ಕ್ರಿಕೆಟ್‌ ನೋಡಿ. ಇದು ಧೀರ ರಾಕ್‌ಲೈನ್‌ ವೆಂಕಟೇಶ್‌ ಮಾಸ್ಟರ್‌ ಯೋಜನೆ. 'ನಾಗರಹಾವು" ಕೆಸೆಟ್‌ ಬಿಡುಗಡೆ ಸಮಾರಂಭವನ್ನು ಅವರು ಆಯೋಜಿಸಿರುವುದು ಹೀಗೆ. ದಟ್ಸ್‌ಕನ್ನಡ ಡಾಟ್‌ ಕಾಂ ಜೊತೆ ಮಾತಾಡಿ, ಈ ಅಪರೂಪದ ಯೋಚನೆಯನ್ನು ಬಿಚ್ಚಿಟ್ಟ ರಾಕ್‌, ಕೆಸೆಟ್‌ ಬಿಡುಗಡೆ ಸಮಾರಂಭಕ್ಕೆ ಕಮ್ಮಿಯೆಂದರೂ 50 ಸಾವಿರ ಜನರ ನಿರೀಕ್ಷೆಯಲ್ಲಿದ್ದಾರೆ !

English summary
Rockline Venkatesh organises cricket match b/w Stars and Veteran Cricket Stars
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada