ವೀರಕನ್ನಡಿಗನ ‘ಮೌರ್ಯ’ ಸಾಮ್ರಾಜ್ಯ !

ಪುನೀತ್‌ರ ಮೊದಲ ಚಿತ್ರ 'ಅಪ್ಪು", ಎರಡನೇ ಚಿತ್ರ 'ಅಭಿ" ಭಾರೀ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮೂರನೇ ಚಿತ್ರ 'ವೀರ ಕನ್ನಡಿಗ" ಬಗ್ಗೆ ವಿಪರೀತ ನಿರೀಕ್ಷೆಗಳಿದ್ದವು. ಚಿತ್ರ ಪೂರಾ ನೆಲ ಕಚ್ಚಲಿಲ್ಲ . ಹಾಗೆಂದು ಯಶಸ್ವಿ ಅನ್ನುವಂತೆಯೇ ಇಲ್ಲ . ಚಿತ್ರದ ಗುಣಮಟ್ಟದ ಬಗ್ಗೆ ಸ್ವತಃ ಪುನೀತ್‌ಗೆ ಅಸಮಾಧಾನವಿದೆ. ಹ್ಯಾಟ್ರಿಕ್ ಕೈತಪ್ಪಿದ ಬಗ್ಗೆ ವಿಷಾದವೂ ಇದೆ. ಅದೆಲ್ಲ ಮುಗಿದುಹೋದ ಕಥೆ. ಈಗೇನಿದ್ದರೂ 'ಮೌರ್ಯ" ಸಾಮ್ರಾಜ್ಯ!
ಅಪ್ಪು , ಅಭಿಯಂತೆ 'ಮೌರ್ಯ" ಕೂಡ ಎರಡಕ್ಷರದ ಹೆಸರಿನ ಚಿತ್ರ. ಎರಡಕ್ಷರದ ಚಿತ್ರ ಆಗಿಬರುತ್ತದೆಂದು ಪುನೀತ್‌ಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ . ಆದರೆ ಪುನೀತ್ ಹಾಗೂ ಸುದೀಪ್‌ಗೆ ಎರಕ್ಷರದ ಚಿತ್ರಗಳೆಂದರೆ ಇಷ್ಟ . ಇನ್ನು, 'ಮೌರ್ಯ" ಚಿತ್ರ ಕೂಡ ರಾಜ್ ಬ್ಯಾನರ್‌ನಲ್ಲಿ ತಯಾರಾಗುತ್ತಿಲ್ಲ . ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪುನೀತ್‌ರ ಕಾಲ್‌ಷೀಟ್‌ಗಾಗಿ ಬಹಳ ಕಾಲದಿಂದ ಕಾಯುತ್ತಿದ್ದ ರಾಕ್ ನಿರೀಕ್ಷೆ ಫಲಿಸಿದೆ.
ಎಸ್. ನಾರಾಯಣ್ 'ಮೌರ್ಯ" ಚಿತ್ರದ ನಿರ್ದೇಶಕರು. ಹಾಗೆ ನೋಡಿದರೆ ಕಳೆದ ಫೆಬ್ರವರಿಯಲ್ಲೇ ಪುನೀತ್ ಅಭಿನಯದ ಚಿತ್ರವೊಂದನ್ನು ನಾರಾಯಣ್ ನಿರ್ದೇಶಿಸಬೇಕಿತ್ತು . ಸೂಕ್ತ ಕಥೆ ದೊರಕದೆ ಹೋದ ಕಾರಣ ಆ ಪ್ರಾಜೆಕ್ಟ್ ಮುಂದೆ ಹೋಗಿದೆ ಎನ್ನುತ್ತಾರೆ ಪುನೀತ್. ಮೀರಾ ಜಾಸ್ಮಿನ್ ಗೊತ್ತಲ್ಲ ! ಈ ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತ ನಟಿ ; ಆ ಮಲಯಾಳಿ ಮಲ್ಲಿಗೆ 'ಮೌರ್ಯ"ನಿಗೆ ನಾಯಕಿ. ಸದ್ಯದಲ್ಲೇ ಹಾಡುಗಳ ಧ್ವನಿಮುದ್ರಣ, ಆನಂತರ ಚಿತ್ರೀಕರಣ ಎನ್ನುತ್ತಾರೆ ರಾಕ್.


Click it and Unblock the Notifications