»   » ಮೊದಲ ರಾತ್ರಿಯ ಬಳಿಕ ಬಳಿ ಬಂದ ಪ್ರೇಯಸಿ!

ಮೊದಲ ರಾತ್ರಿಯ ಬಳಿಕ ಬಳಿ ಬಂದ ಪ್ರೇಯಸಿ!

Posted By: Super
Subscribe to Filmibeat Kannada

ಜೋಧಪುರ, ಆಗಸ್ಟ್ 26 : ಸಂಜುಬಾಬಾನನ್ನು ತಪ್ಪಿ ಅಪ್ಪಿಕೊಂಡ ಪೊಲೀಸರ ಎದೆ ಢವಗುಡುತ್ತಿದ್ದರೆ ಜೋಧಪುರದಲ್ಲಿ ಪೊಲೀಸರ ಎದೆ ಮತ್ತೊಂದು ರೀತಿ ಢವಗುಡಲು ಪ್ರಾರಂಭಿಸಿದೆ. ಚಿಂಕಾರಾಗಳನ್ನು ಕೊಂದ ಆರೋಪದ ಮೇಲೆ ಜೈಲುಪಾಲಾಗಿರುವ ಮ್ಯಾಕೋಮ್ಯಾನ್ ಸಲ್ಮಾನ್ ಖಾನ್‌ನ ಪ್ರೇಯಸಿ ಕತ್ರಿನಾ ಕೈಫ್ ಆತ ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಬಳಿಕ ಭಾನುವಾರ ಭೇಟಿಯಾಗಿದ್ದಾರೆ.

ಕತ್ರಿನಾ ಬಿರುಗಾಳಿಗೆ ಸಿಲುಕಿದ ಚಿಗರೆಯಂತೆ ಮಾಯವಾಗಿದ್ದ ಕತ್ರಿನಾ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಒಂದೇ ಮಾತು. ಎಲ್ಲಿ ಕತ್ರಿನಾ, ಎಲ್ಲಿ ಕತ್ರಿನಾ?
ಕೆಲ ಅಪರಾಧಗಳಲ್ಲಿ ಭಾಗಿಯಾದ್ದಾನೆಂಬ ಆರೋಪ ಹೊರುತ್ತಿದ್ದಂತೆಯೇ ಸಲ್ಲುಗೆ ಕೈಕೊಟ್ಟಿದ್ದ ಐಶ್ವರ್ಯಳಂತೆ ಕತ್ರಿನಾಳೂ ಕೈಕೊಡುತ್ತಾಳಾ ಎಂದು ಊಹಾಪೋಹಗಳ ಬಲೂನು ಎಲ್ಲ ಊದುತ್ತಿದ್ದರು.

ಆದರೆ ಎಲ್ಲರ ಊಹೆಗಳಿಗೆ ವ್ಯತಿರಿಕ್ತವಾಗಿ ಕತ್ರಿನಾ ಪ್ರಿಯಕರನನ್ನು ಭೇಟಿಯಾಗಿ ಪ್ರಿಯತಮೆಯ ಧರ್ಮವನ್ನು ಮೆರೆದಿದ್ದಾರೆ.

ಸಲ್ಲುನನ್ನು ಸಂತೈಸಲು ಹೋದಾಗ ಆಕೆಯೂ ಜಾದೂ ಕಿ ಜಪ್ಪಿ ನೀಡದರಾ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

(ಏಜೆನ್ಸಿಯಿಂದ)

English summary
Katrina Kaif meets Salman Khan in Jodhpur jail.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada