»   » ನೂರು ವರ್ಷಗಳ ಬಾಲಿವುಡ್‌ಗೆ ಕನ್ನಡಿ ಹಿಡಿವ ಹೊತ್ತಗೆ

ನೂರು ವರ್ಷಗಳ ಬಾಲಿವುಡ್‌ಗೆ ಕನ್ನಡಿ ಹಿಡಿವ ಹೊತ್ತಗೆ

Posted By: Staff
Subscribe to Filmibeat Kannada

ನೂರು ವರ್ಷಗಳ ಹಿಂದಿ ಸಿನಿಮಾ ಜಗತ್ತಿನ ಪೂರ್ಣ ಪಾಠ ನಿಮಗೆ ಬೇಕೆ? ಹಾಗಿದ್ದರೆ, ಈ ಪುಸ್ತಕ ಕೊಂಡುಕೊಳ್ಳಿ- ಪುಸ್ತಕದ ಹೆಸರು Bollywood--Popular Indian Cinema.

ಡಕಿನಿ ಬುಕ್ಸ್‌ ಹೊರತಂದಿರುವ 352 ಪುಟಗಳ ಈ ಕಾಫಿ ಟೇಬಲ್‌ ಪುಸ್ತಕದಲ್ಲಿ ಭಾರತೀಯ ಸಿನಿಮಾ ಉದ್ದಿಮೆಯ ಚಾರಿತ್ರಿಕ ವಿಶ್ಲೇಷಣೆ, ಸಿನಿಮಾ ನಿರ್ಮಾಣದ ಹಂತಗಳು, ಮಧುರ ಕ್ಷಣಗಳು, ಚೆಂದದ ಚಿತ್ರಗಳು ಮೊದಲಾದ ತಿರುಳಿದೆ. ಖಳನಾಯಕರ ಕುರಿತ ವಿಶೇಷ ನುಡಿಚಿತ್ರ ಕೂಡ ಇದೆ.

ಪುಸ್ತಕದ ಎಂಟು ಅಧ್ಯಾಯಗಳನ್ನು ಚಿತ್ರೋದ್ಯಮದ ದಿಗ್ಗಜ್ಜರ ಕೈಲಿ ಬರೆಸಲಾಗಿದೆ. ಗುಲ್ಜಾರ್‌, ಶ್ಯಾಂ ಬೆನೆಗಲ್‌ ಅಲ್ಲದೆ ಹೆಸರಾಂತ ಚಿತ್ರ ವಿಮರ್ಶಕರೂ ಈ ಪುಸ್ತಕದಲ್ಲಿ ಬರೆದಿದ್ದಾರೆ. 430 ಚೆಂದದ ಚಿತ್ರಗಳಿದ್ದು, ಈ ಪೈಕಿ 114 ಪೂರ್ಣ ಪುಟದ ಚಿತ್ರಗಳು. ಲಲಿತ್‌ ಮೋಹನ್‌ ಜೋಶಿ ಪುಸ್ತಕದ ಸಂಪಾದಕ. ಅಂತರರಾಷ್ಟ್ರೀಯ ಸಿನಿಮಾ ವಿಮರ್ಶಕ ಡೆರೆಕ್‌ ಮಾಲ್ಕಂ ಪುಸ್ತಕದ ಮುನ್ನುಡಿ ಬರೆದಿದ್ದಾರೆ.

ಅಂದಹಾಗೆ, ಸೆಪ್ಟೆಂಬರ್‌ 23ನೇ ತಾರೀಖು ಬಾಲಿವುಡ್‌ ನಟಿ ರೇಖಾ ಮುಂಬಯಿಯ ಆಕ್ಸ್‌ಫರ್ಡ್‌ ಬುಕ್‌ಸ್ಟೋರ್‌ನಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

English summary
Rekha launches book on Bollywood
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada