»   » ಭಲೇ ರಾಜ!: 30ನಿಮಿಷದಲ್ಲಿ 6ಹಾಡುಗಳಿಗೆ ಸಂಗೀತ

ಭಲೇ ರಾಜ!: 30ನಿಮಿಷದಲ್ಲಿ 6ಹಾಡುಗಳಿಗೆ ಸಂಗೀತ

Subscribe to Filmibeat Kannada

ಇಳಯರಾಜರ ಹೆಸರು ಕಂಡರೆ ಸಾಕು, ಕಿವಿಗಳು ಅರಳುತ್ತವೆ! ಕಿವಿಕಚ್ಚುವ ಸಂಗೀತದಿಂದ ಬೆಚ್ಚಿಬೀಳಿಸುವವರ ಮಧ್ಯೆ ಇಳಯರಾಜ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಇಳಯರಾಜ ಅವರ ಸಂಗೀತದಲ್ಲಿ ಒಂದು ಮ್ಯಾಜಿಕ್ ಇದೆ ಅನ್ನುತ್ತಾರೆ ಅವರ ಅಭಿಮಾನಿಗಳು.

ತಮಿಳು ಚಿತ್ರವೊಂದಕ್ಕೆ ಅವರೀಗ ಸಂಗೀತ ನೀಡುತ್ತಿದ್ದಾರೆ. ಇದರಲ್ಲೇನು ವಿಶೇಷ ಅನ್ನುವಿರಾ? ಕೇವಲ 30ನಿಮಿಷಗಳಲ್ಲಿ ಆರು ಗೀತೆಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಇದು ಇಳಯರಾಜ ಅವರ ತಾಕತ್ತು! ಪಿ.ವಾಸು ಬಳಿ ಸಹಾಯಕ ನಿರ್ದೇಶಕರಾಗಿದ್ದ ಚಂದ್ರನಾಥ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ತಮಿಳು ಚಿತ್ರಕ್ಕೆ ಸಂಗೀತ ನೀಡಿ, ಇಳಯರಾಜ ಶುಭಕೋರಿದ್ದಾರೆ. ಯುವ ನಿರ್ದೇಶಕರನ್ನು ಬೆಂಬಲಿಸುವ ಅವರ ಕೈಂಕರ್ಯ ಸಾಂಗವಾಗಿ ಮುಂದುವರೆದಿದೆ.

ಆಕಾಶ್, ರಜಿತ್, ರತನ್ ಲಿತಿಕಾ, ಮೃದುಲಾ ಮತ್ತು ಲಕ್ಷಣ ಸೇರಿದಂತೆ ಆರು ಮಂದಿ ಹೊಸಬರನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಚಿತ್ರದ ಕತೆಯನ್ನು ಆಸಕ್ತಿಯಿಂದ ಕೇಳಿದ ನಂತರ ಇಳಯರಾಜ, ಸಂಗೀತ ನೀಡಿದರು. ಇದು ನನ್ನ ಪೂರ್ವ ಜನ್ಮದ ಸುಕೃತ. ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಚಂದ್ರನಾಥ್ ಹೇಳಿದ್ದಾರೆ.

(ದಟ್ಸ್ ಚಿತ್ರ ವಾರ್ತೆ )

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada