ಪ್ರಖ್ಯಾತ ರಂಗ ನಿರ್ದೇಶಕಿ ಪ್ರೇಮಾ ಕಾರಂತ ಸ್ಥಿತಿ ಗಂಭೀರ
ಬೆಂಗಳೂರು, ಅ.26 : ತೀವ್ರ ಅನಾರೋಗ್ಯದಿಂದ ಬಳಲಿರುವ ರಂಗ ನಿರ್ದೇಶಕಿ ಮತ್ತು ವಸ್ತ್ರ ವಿನ್ಯಾಸಕಿ ಪ್ರೇಮಾ ಕಾರಂತ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ಶುಕ್ರವಾರ(ಅ.26) ತಿಳಿಸಿದ್ದಾರೆ.
ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಪ್ರೇಮಾ ಕಾರಂತ ಅವರನ್ನು ಮಂಗಳವಾರ(ಅ.23)ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹೃದಯ ಸಮಸ್ಯೆ ಜೊತೆಗೆ ಕಿಡ್ನಿ ತೊದರೆಯನ್ನೂ ಹೊಂದಿದ್ದಾರೆ.
ತಮ್ಮ ಪತಿ ದಿವಂಗತ ಬಿ.ವಿ.ಕಾರಂತ ಅವರ ಜೊತೆ ಸೇರಿ ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿ ಪ್ರೇಮಾ ಕಾರಂತ ದುಡಿದಿದ್ದಾರೆ. ಬೆನಕ ಮಕ್ಕಳ ರಂಗವನ್ನು ಕಟ್ಟಿ, ಮಕ್ಕಳ ಮಕ್ಕಳ ರಂಗಭೂಮಿಗೆ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿವೆ. 'ಫಣಿಯಮ್ಮ'ಸೇರಿದಂತೆ ಆರು ಚಲನಚಿತ್ರಗಳನ್ನು ಪ್ರೇಮಾ ಕಾರಂತ ನಿರ್ದೇಶಿಸಿದ್ದಾರೆ.
60ವರ್ಷದ ಪ್ರೇಮಾ ಕಾರಂತ ಅವರಿಗೆ ಮಕ್ಕಳು ಮತ್ತು ಆಪ್ತ ಸಂಬಂಧಿಕರು ಯಾರೂ ಇಲ್ಲ. ಹೀಗಾಗಿ ಸರ್ಕಾರವೇ ಚಿಕಿತ್ಸೆಯ ಖರ್ಚು ವೆಚ್ಚ ಭರಿಸಲು ಮುಂದೆ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications