»   » ಮನೆಯಲ್ಲೀಗ ಐಶ್ವರ್ಯ ಇಲ್ಲ ರೈ

ಮನೆಯಲ್ಲೀಗ ಐಶ್ವರ್ಯ ಇಲ್ಲ ರೈ

Posted By:
Subscribe to Filmibeat Kannada
  • ವಿನಾಯಕ ಭಟ್ಟ ಮೂರೂರು
ಹಾಳು ಬಿದ್ದ ಮನೆ, ಪಾಳು ಬಿದ್ದ ಆಸ್ಪತ್ರೆ ಎರಡೂ ಮಂಗಳೂರಲ್ಲಿವೆ. ಐಶ್ವರ್ಯಾ ಜಗತ್ತಿನಲ್ಲಿ ಪ್ರಖ್ಯಾತರಾಗುವುದ ಕ್ಕೂ, ಆಸ್ಪತ್ರೆ ಜನಪ್ರಿಯತೆ ಕಳೆದುಕೊಳ್ಳುವುದಕ್ಕೂ ಸಂಬಂಧ ಇಲ್ಲದೇ ಇರಬಹುದು. ಕಾರಣಗಳು ಬೇರೆಯೇ ಇರಬಹುದು. ಆದರೆ ಇದಂತೂ ನಿಜ.

ವಿಶ್ವ ಸುಂದರಿ ಐಶ್ವರ್ಯಾ ರೈ ಅಥವಾ ಐಶ್‌ ಹುಟ್ಟಿದ ಮನೆ, ಆಸ್ಪತ್ರೆ ಪರಿಚಯವೇ ಹೆಚ್ಚಿನವರಿಗಿಲ್ಲ. ಬಹಳ ಜನರಿಗೆ ಐಶ್ವರ್ಯಾ ಮಂಗಳೂರಿನಲ್ಲಿ ಹುಟ್ಟಿದ್ದೆಂದು ಗೊತ್ತಿಲ್ಲ. ಗೊತ್ತಿದ್ದರೂ ಅವಳು ಹುಟ್ಟಿದ ಆಸ್ಪತ್ರೆ, ಆವಳು ಇದ್ದ ಮನೆ ಬಗ್ಗೆ ವಿವರವಿಲ್ಲ. ಐಶ್ವರ್ಯಾ ಹುಟ್ಟಿದ್ದು, ನವೆಂಬರ್‌ 1 ರಂದು 1973ರಲ್ಲಿ. ಅವಳೂ ಮಂಗಳೂರಿನಲ್ಲಿದ್ದದ್ದೂ ಒಂದೂವರೆ ವರ್ಷ ಮಾತ್ರ.

ಬಾವುಟ ಗುಡ್ಡೆಯಿಂದ ಜ್ಯೋತಿ ವೃತ್ತಕ್ಕೆ ಹೋಗುವ ದಾರಿಯಲ್ಲಿ ಐಶ್ವರ್ಯ ರೈ ಹುಟ್ಟಿದ ಆಸ್ಪತ್ರೆಯಿದೆ. ಅದೀಗ ಬಾಗಿಲು ಮುಚ್ಚಿದೆ. ಜ್ಯೋತಿ ವೃತ್ತದಿಂದ ಘಳ್ನೀರಿಗೆ ಹೋಗುವ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಮನೆಗಳ ನಡುವೆ ಒಂದು ಹಳೆಯ ಮಾದರಿಯ ಮಧ್ಯಮ ಗಾತ್ರದ ಮನೆಯಾಂದಿದೆ. ಅದೇ ಐಶ್ವರ್ಯಾ ರೈ ಹುಟ್ಟಿದ ಮನೆ. ಅದಕ್ಕೆ ಶಾಶ್ವತ ಬೀಗ ಜಡಿಯಲಾಗಿದೆ. ಇನ್ನೇನು ಕೆಲ ಸಮಯದಲ್ಲಿ ಅದು ಬಿದ್ದೂ ಹೋಗಬಹುದು.

ಐಶ್ವರ್ಯಾಳ ಮೇಣದ ಬೊಂಬೆಯನ್ನು ಲಂಡನ್‌ನ ಮೇಡಮ್‌ ಟುಸ್ಸಾಡ್ಸ್‌ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಈ ಗೌರವ ಪಡೆದ ಎರಡನೇ ಭಾರತೀಯ ನಟಿ ಎಂಬ ಹೆಗ್ಗಳಿಕೆ ಬೇರೆ ಉಂಟು. ಇಷ್ಟಾದರೂ ಐಶ್ವರ್ಯಾಳ ಹುಟ್ಟೂರಾದ ಮಂಗಳೂರಿನಲ್ಲಿ ಸಂತಸ ಲವಲೇಶವೂ ಕಾಣಲಿಲ್ಲ.

ಇದಕ್ಕಂತೂ ಕಾರಣ ಐಶ್ವರ್ಯಾಳೇ. ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟ ಧರಿಸಿದಾಗ ಸಂತಸ ಪಟ್ಟ ಮನಸುಗಳು ಮಂಗಳೂರಿನಲ್ಲಿ ಬೇಕಾದಷ್ಟಿದ್ದವು. ‘ಆಲ್‌ ಕುಡ್ಲದಾಲ್‌’(ಅವಳು ಮಂಗಳೂರಿನವಳು) ಎಂದು ತುಳುವಿನಲ್ಲಿ ಹೇಳಿಕೊಂಡು ಎದೆ ಉಬ್ಬಿಸಿ ನಡೆದಾಡಿದವರಿದ್ದರು. ಆದರೆ ಐಶ್ವರ್ಯಾ ಮಂಗಳೂರಿನ ನಂಟು ಇಟ್ಟು ಕೊಳ್ಳಲೇ ಇಲ್ಲ. ಮಂಗಳೂರಿನಲ್ಲಿ ಇಂದಿಗೂ ಐಶ್ವರ್ಯಾಳ ಸಂಬಂಧಿಕರಿದ್ದಾರೆ. ಅವಳೊಡನೆ ಆಡಿದ ತಕ್ಕಮಟ್ಟಿಗೆ ಅವಳಂತೆ ಯೇ ಇರುವ ತಂಗಿ(ಕಸಿನ್‌)ಇದ್ದಾಳೆ. ಅವರೊಟ್ಟಿಗೂ ಐಶ್‌ಳ ಸಂಬಂಧ ಅಷ್ಟಕ್ಕಷ್ಟೇ.

ಐಶ್ವರ್ಯಾಳ ಹುಟ್ಟಿದ ಮನೆ, ಆಸ್ಪತ್ರೆ ಎರಡೂ ಅಳಿಸಿ ಹೋದರೆ ಐಶ್ವರ್ಯಾ ಮತ್ತು ಮಂಗಳೂರಿನ ಸಂಬಂಧಕ್ಕೆ ಶಾಶ್ವತ ತೆರೆಬಿದ್ದಂತೆಯೇ ಸರಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada