»   » ನಟ ಉಪೇಂದ್ರನ ಮೇಲಿನ ಅಭಿಮಾನಕ್ಕೆ ಬಲಿಯಾದನೊಬ್ಬ ಅಭಿಮಾನಿ!

ನಟ ಉಪೇಂದ್ರನ ಮೇಲಿನ ಅಭಿಮಾನಕ್ಕೆ ಬಲಿಯಾದನೊಬ್ಬ ಅಭಿಮಾನಿ!

Posted By: Staff
Subscribe to Filmibeat Kannada

ಬೆಂಗಳೂರು: ಚಿತ್ರನಟರು ಹಾಗೂ ಅಭಿಮಾನಿಗಳ ನಂಟು ಬಹಳ ವಿಚಿತ್ರ. ಇಂತಹ ಹುಚ್ಚು ಅಭಿಮಾನವನ್ನು ಪ್ರದರ್ಶಿಸಲು ಹೋಗಿ ನಟ ಉಪೇಂದ್ರನ ಅಭಿಮಾನಿಯಾಬ್ಬ ಬಲಿಯಾಗಿದ್ದಾನೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೊಟ್ರೇಶ್‌(24)ಗೆ ಉಪೇಂದ್ರನ ಬಗ್ಗೆ ತುಂಬ ಪ್ರೀತಿ. ಹಿಂದೆ ಅನೇಕ ಸಲ ನೆಚ್ಚಿನ ನಟನನ್ನು ಭೇಟಿ ಮಾಡಿದ್ದ. ಹೊಸ ಚಿತ್ರ ಓಂಕಾರದಲ್ಲಿ ಉಪೇಂದ್ರನ ನಟನೆ ಕೊಟ್ರೇಶ್‌ಗೆ ಇಷ್ಟವಾಗಿದೆ. ತನ್ನ ಖುಷಿಯನ್ನು ಹಂಚಿಕೊಂಡು ಅಭಿನಂದಿಸ ಬೇಕೆಂದು ಕೊಟ್ರೇಶ್‌ ನಿರ್ಧರಿಸಿದ್ದಾನೆ.

ನಗರದ ಬನಶಂಕರಿ ಎರಡನೇ ಹಂತದಲ್ಲಿರುವ ಉಪೇಂದ್ರನ ಮನೆಗೆ ಭಾನುವಾರ ರಾತ್ರಿ ತೆರಳಿದಾಗ, ಉಪೇಂದ್ರ ಮನೆಯಲ್ಲಿ ಇಲ್ಲ ಎಂದು ಕಾವಲುಗಾರ ತಡೆದಿದ್ದಾನೆ. ನಿರಾಸೆಯಾದರೂ ಸಹಾ ಉಪೇಂದ್ರನನ್ನು ಕಾಣುವ ಬಯಕೆ ಕೊಟ್ರೇಶ್‌ನಲ್ಲಿ ಇನ್ನೂ ಹೆಚ್ಚಾಗಿದೆ.

ಉಪೇಂದ್ರನ ಮನೆಯ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕಿರಣದಎರಡನೇ ಅಂತಸ್ತಿಗೆ ಹೋಗಿ, ತನ್ನ ನೆಚ್ಚಿನ ನಟನನ್ನು ದೂರದಿಂದ ನೋಡಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲು ಜಾರಿ, ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ನಗರದ ಸೌತ್‌ ಎಂಡ್‌ ಸರ್ಕಲ್‌ ಬಳಿಯ ಪುಟ್‌ಪಾತ್‌ನಲ್ಲಿ ಬೆಲ್ಟ್‌ , ಪರ್ಸ್‌ ಮತ್ತಿತರ ವಸ್ತುಗಳ ಮಾರುತ್ತಿದ್ದ ಕೊಟ್ರೇಶ್‌ ಎಂಬ ಅಮಾಯಕ ಅಭಿಮಾನಕ್ಕೆ ಬಲಿಯಾಗಿದ್ದಾನೆ.(ಇನ್ಫೋ ವಾರ್ತೆ)

English summary
A fan of Kannada film star Upendra died after he accidentally slipped and fell off a building near the star's house in Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada