»   » ಪುನೀತ್‌ ರಾಜ್‌ಕುಮಾರ್‌ ಅನಿವಾಸಿ ಭಾರತೀಯ!

ಪುನೀತ್‌ ರಾಜ್‌ಕುಮಾರ್‌ ಅನಿವಾಸಿ ಭಾರತೀಯ!

Subscribe to Filmibeat Kannada


ಪುನೀತ್‌ ರಾಜ್‌ಕುಮಾರ್‌ ಅನಿವಾಸಿ ಭಾರತೀಯ(ಎನ್‌ಆರ್‌ಐ)ನ ಪಾತ್ರದಲ್ಲಿ ನಟಿಸುತ್ತಿರುವ ‘ಅರಸು’ ಚಿತ್ರದ ಬಗ್ಗೆ ಎಲ್ಲರಿಗೂ ಕುತೂಹಲ. ಯುರೋಪ್‌ ಪ್ರವಾಸವನ್ನು ಮುಗಿಸಿಕೊಂಡು, ‘ಅರಸು’ ಚಿತ್ರತಂಡ ತವರಿಗೆ ಮರಳಿದೆ. ಎರಡು ಹಾಡುಗಳು ಮತ್ತು ಕೆಲವು ಸನ್ನಿವೇಶಗಳನ್ನು ಜರ್ಮನಿ ಮತ್ತು ಇಟಲಿಯಲ್ಲಿ ಚಿತ್ರೀಕರಿಸಲಾಗಿದೆ.

ಜರ್ಮನಿಯ ಫ್ರಾಂಕ್‌ಫರ್ಟ್‌ ಮತ್ತು ಇಟಲಿಯ ವೆನಿಸ್‌ನಲ್ಲಿ ನಡೆದ ಹಾಡಿನ ಚಿತ್ರೀಕರಣದಲ್ಲಿ ಪುನೀತ್‌ ರಾಜ್‌ಕುಮಾರ್‌ ಮತ್ತು ರಮ್ಯಾ ಪಾಲ್ಗೊಂಡಿದ್ದರು. ಮಹೇಶ್‌ ಬಾಬು ನಿರ್ದೇಶನದ ಈ ಚಿತ್ರದ ನಿರ್ಮಾಪಕಿ, ಪಾರ್ವತಮ್ಮ ರಾಜ್‌ಕುಮಾರ್‌. ಶ್ರೀಧರ್‌ ಸಂಗೀತ ನಿರ್ದೇಶಕರಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ.

ಚಿತ್ರದ ಅಂತಿಮ ದೃಶ್ಯಗಳ ಚಿತ್ರೀಕರಣ, ಪ್ರಸ್ತುತ ಚಾಮರಾಜಪೇಟೆಯಲ್ಲಿ ಭರದಿಂದ ಸಾಗಿದೆ.

ಪಾಪ ರಮ್ಯಾ! : ದೀಪಾವಳಿ ದಿನ ಎಲ್ಲಾ ಟೀವಿ ಚಾನೆಲ್‌ಗಳಲ್ಲೂ ರಕ್ಷಿತಾಳದೇ ದರ್ಶನ. ಮದುವೆಗೆ ಸಿದ್ಧವಾದ ಮಧುಮಗಳಂತೆ ಈಯಮ್ಮ ಕನ್ನಡ ಚಾನೆಲ್‌ಗಳ ಲೈವ್‌ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದರು. ಆದರೆ ಇತ್ತ ‘ಅರಸು’ ದೆಸೆಯಿಂದಾಗಿ ನಟಿ ರಮ್ಯಾ, ದೀಪಾವಳಿ ಸಡಗರವನ್ನು ಕಳೆದುಕೊಂಡಿದ್ದರು.

ಆದರೂ ‘ಅರಸು’ ಚಿತ್ರದ ಅನುಭವ ನನಗೆ ಇನ್ನೊಂದು ರೀತಿಯ ಖುಷಿ ನೀಡಿದೆ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada