»   » ಮುತ್ತಿನ ಹಾರ ಹರಿಯಿತು: ಸಿನಿ ಛಾಯಾಗ್ರಾಹಕ ರಾಜಾರಾಂ ಇನ್ನಿಲ್ಲ

ಮುತ್ತಿನ ಹಾರ ಹರಿಯಿತು: ಸಿನಿ ಛಾಯಾಗ್ರಾಹಕ ರಾಜಾರಾಂ ಇನ್ನಿಲ್ಲ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕ ಡಿ.ವಿ. ರಾಜಾರಾಂ (74) ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ನ.25) ಮೃತಪಟ್ಟರು.

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷರೂ ಆಗಿದ್ದ ರಾಜಾರಾಂ, 1952 ರಲ್ಲಿ ಸಂತ ತುಕಾರಾಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಚಿತ್ರೋದ್ಯಮವನ್ನು ಪ್ರವೇಶಿಸಿದ್ದರು.

ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಮುತ್ತಿನಹಾರ, ಬಂಧನ, ಶರಪಂಜರ, ಮಿಸ್‌ ಲೀಲಾವತಿ, ಗುರುಶಿಷ್ಯರು ಸೇರಿದಂತೆ ಹಲವಾರು ಭಾಷೆಗಳ 250 ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಾಹಣ ನೀಡಿದ ಸಾಧನೆ ಅವರದು. ಮೂರು ಬಾರಿ ರಾಜ್ಯ ಸಿನಿಮಾ ಪ್ರಶಸ್ತಿ ಅವರಿಗೆ ಸಂದಿದೆ.

ಪಾಲುದಾರಿಕೆಯಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದ ರಾಜಾರಾಂ ಸದಭಿರುಚಿಯ ಚಿತ್ರಗಳಿಗೆ ಹೆಸರಾಗಿದ್ದರು. ಕಲಾಕೃತಿ ಬ್ಯಾನರ್‌ನಡಿ ಹೃದಯಗೀತೆ, ಜೀವನ ಚಕ್ರ, ಕರುಣಾಮಯಿ, ಜನನಾಯಕ, ಗಂಡನಿಗೆ ತಕ್ಕ ಹೆಂಡತಿ ಚಿತ್ರಗಳನ್ನು ಅವರು ನಿರ್ಮಿಸಿದ್ದರು.

(ಇನ್ಫೋ ವಾರ್ತೆ)

English summary
Cinematographer D.V. Rajaram Dead
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada