»   » ರಾಜೇಂದ್ರಸಿಂಗ್‌ಬಾಬುಗೆ ಮರುಜನ್ಮ

ರಾಜೇಂದ್ರಸಿಂಗ್‌ಬಾಬುಗೆ ಮರುಜನ್ಮ

Subscribe to Filmibeat Kannada

ಬೆಂಗಳೂರು : ಚಿತ್ರೀಕರಣ ಸಂದರ್ಭದಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ನಗರದ ರೇಸ್‌ಕೋರ್ಸ್‌ ರಸ್ತೆಯ ಹೈಲ್ಯಾಂಡ್ಸ್‌ ಹೋಟೆಲ್‌ ಸಮೀಪ ಶುಕ್ರವಾರ ನಡೆದ ಈ ದುರಂತದಲ್ಲಿ, ಛಾಯಾಗ್ರಾಹಕ ಗಿರಿ ಕಾಲು ಮುರಿದುಕೊಂಡು, ಅವರ ಸಹಾಯಕ ಚಂದ್ರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಮೋಹಿನಿ’ ಚಿತ್ರದ ಚಿತ್ರೀಕರಣ ಅಲ್ಲಿ ನಡೆಯುತ್ತಿತ್ತು. ವೇಗವಾಗಿ ಕಾರು ಬಂದು ನಿಲ್ಲುವ ದೃಶ್ಯವನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ, ಬ್ರೇಕ್‌ ವೈಫಲ್ಯದಿಂದ ಅಪಘಾತ ನಡೆದಿದೆ.

ಈ ಚಿತ್ರದಲ್ಲಿ ಆದಿತ್ಯ ಮತ್ತು ತೆಲುಗಿನ ಮೋಹಕ ಬೆಡಗಿ ಸದಾ ತಾರಾಗಣದಲ್ಲಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada