ತಂಗಿಯೆಂದರೆ ಹೀಗಿರಬೇಕು ಅನ್ನುತ್ತಿದ್ದಾರೆ ನಿರ್ಮಾಪಕರು..
'ತವರಿಗೆ ಬಾ ತಂಗಿ" ಚಿತ್ರದ ಯಶಸ್ಸಿನ ನಾಗಾಲೋಟ ಮುಂದುವರಿದಿದೆ. ಬಂಡವಾಳ 1 ಕೋಟಿ, ಲಾಭ 5 ಕೋಟಿ. ಇದು ಚಿತ್ರ 50 ದಿನ ಪೂರೈಸಿದ ಸಂದರ್ಭದಲ್ಲಿನ ಲೆಕ್ಕಾಚಾರ.
ಇದೇನು ಸಾಯಿ ಕೃಪೇನಾ? ಪವಾಡವಾ? ಎಂದು ತಂಗಿಯ ಈ ಪಾಟಿ ಯಶಸ್ಸಿನ ಬಗ್ಗೆ ಮಾತನಾಡಿದರೆ ನಿರ್ದೇಶಕ ಸಾಯಿಪ್ರಕಾಶ್ ಖುಷಿಯಾಗುತ್ತಾರೆ. 'ನಿರ್ಮಾಪಕ ಆರ್.ಎಸ್.ಗೌಡರ ಅದೃಷ್ಟ ಚೆನ್ನಾಗಿದೆ ಬಿಡಿ. ಸೂಪರ್ ಲೊಟ್ಟೊ ಬಂಪರ್ ಹೊಡೆದರು" ಎಂದು ಸಾಯಿ ನಗುತ್ತಾರೆ.
ಬಂಪರ್‌ನಲ್ಲಿ ನಿಮಗೆಷ್ಟು ಪರ್ಸೆಂಟೇಜು ಅನ್ನುವ ಪ್ರಶ್ನೆಗೆ ಸಾಯಿಪ್ರಕಾಶ್ ನಗುವುದಿಲ್ಲ . 'ಸಂಭಾವನೆಯ ಹೊರತಾಗಿ ಹೆಚ್ಚಿಗೆ ಒಂದು ಪೈಸೆಯೂ ಚುಕ್ತಾ ಆಗಿಲ್ಲ . ದುಡ್ಡಿನ ಮಾತಿರಲಿ ಒಂಚೂರು ಸ್ವೀಟನ್ನು ನಿರ್ಮಾಪಕರು ಕೊಟ್ಟಿಲ್ಲ" ಎಂದು ಗೌಡರ ಕಂಜೂಸ್ ಬುದ್ಧಿಯನ್ನು ಸಾಯಿ ಬಣ್ಣಿಸುತ್ತಾರೆ.
ಕೊನೆಯದಾಗಿ ಸಾಯಿ ಹೇಳುವುದು :
'ಅವರವರ ಅದೃಷ್ಟ ಅವರದು. ಗೌಡರದೇನು ತಪ್ಪಿಲ್ಲ ಬಿಡಿ; ಒಂದುವೇಳೆ ಸಿನಿಮಾ ಸೋತಿದ್ದರೆ ನಾವೇನು ನಿರ್ಮಾಪಕರಿಗೆ ಸಹಾಯ ಮಾಡುತ್ತಿದ್ದೆವಾ ?"
'ತವರಿಗೆ ಬಾ ತಂಗಿ" ಚಿತ್ರದ ಯಶಸ್ಸಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಬೇಡಿಕೆ ಕುದುರಿಸಿಕೊಂಡಿರುವ ಸಾಯಿಪ್ರಕಾಶ್ ಅವರ ಹೊಸ ಚಿತ್ರದ ಹೆಸರು- 'ಅವಳೇ ನನ್ನ ಹುಡುಗಿ"


Click it and Unblock the Notifications