Darshan: ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ ದಾಸನ ಎದೆತುಂಬಿದ ಅಭಿಮಾನ ಸಾಗರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 26 ವರ್ಷ ಕಳೆದಿದೆ. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗಕ್ಕೆ ಲೈಟ್ ಬಾಯ್ ಆಗಿ ಬರುವಂತಾಯಿತು. ಮುಂದೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ಹೀರೊ ಆಗಿ ಸಕ್ಸಸ್ ಕಂಡರು. ಮುಂದೆ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು.

ಸದ್ಯ ಕನ್ನಡ ಚಿತ್ರರಂಗದ ನಂಬರ್ 1 ನಟರ ಸಾಲಿನಲ್ಲಿ ದರ್ಶನ್ ನಿಂತಿದ್ದಾರೆ. ಮಾಸ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ದರ್ಶನ್ ಇತ್ತೀಚಿನ ವರ್ಷಗಳಲ್ಲಿ ಕಥೆಗಳ ಆಯ್ಕೆಯಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿ ಗೆಲ್ಲುತ್ತಿದ್ದಾರೆ. ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದರ್ಶನ್ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ ತಮ್ಮ ನೇರ ನಡೆ, ನುಡಿ, ಸಹಾಯಗುಣ ಹಾಗೂ ಪ್ರಾಣಿ ಪ್ರೇಮದಿಂದಲೂ ದರ್ಶನ್ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

Darshan-26- years-celebration-in-sandalwood

ದರ್ಶನ್‌ಗಾಗಿ ಇಂದು ಜೀವ ಕೊಡುವಂತಹ ಅಭಿಮಾನಿಗಳು ಇದ್ದಾರೆ. ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡು ದರ್ಶನ್ ಈಗ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. 1997ರಲ್ಲಿ ಬಂದ 'ಮಹಾಭಾರತ' ಚಿತ್ರದಲ್ಲಿ ದರ್ಶನ್ ಮೊದಲ ಬಾರಿಗೆ ಪುಟ್ಟ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಮೂರ್ನಾಲ್ಕು ವರ್ಷ ಐದಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು.

ಹೀರೊ ಆಗಿ ಸಕ್ಸಸ್

ಪಿ. ಎನ್ ಸತ್ಯ ನಿರ್ದೇಶನದ 'ಮೆಜೆಸ್ಟಿಕ್' ಸಿನಿಮಾದಲ್ಲಿ ದರ್ಶನ್ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಕರಿಯ, ದಾಸ, ಕಲಾಸಿಪಾಳ್ಯ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಮಾಸ್ ಪ್ರೇಕ್ಷಕರ ಮನಗೆದ್ದರು. ಕನ್ನಡದಲ್ಲಿ ರೌಡಿಸಂ ಸಿನಿಮಾಗಳಂದ್ರೆ ಶಿವಣ್ಣ ನೆನಪಾಗುತ್ತಾರೆ. ಅದೇ ರೀತಿಯಲ್ಲಿ ಲಾಂಗ್ ಹಿಡ್ದು ಸೂಪರ್ ಸಕ್ಸಸ್ ಕಂಡ ನಟರಲ್ಲಿ ದರ್ಶನ್ ಕೂಡ ಮುಂದೆ ನಿಲ್ತಾರೆ. ಸೋತಾಗಲೆಲ್ಲಾ ಮತ್ತೆ ಮತ್ತೆ ಎದ್ದು ಬಂದು ದರ್ಶನ್ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ.

Darshan-26- years-celebration-in-sandalwood

ದರ್ಶನ್ ಅಂದ್ರೆ ಮಾಸ್

ಬಾಕ್ಸಾಫೀಸ್ ಸುಲ್ತಾನ್ ಮಾಸ್ ಕಮರ್ಷಿಯಲ್ ಸಿನಿಮಾಗಳಿಂದಲೇ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದರು. 'ಲಾಲಿಹಾಡು' ರೀತಿಯ ಸಿನಿಮಾಗಳಲ್ಲಿ ನಟಿಸಿ ಪ್ರಯೋಗ ಮಾಡಿದ್ದರು. ಆದರೆ ಅಷ್ಟಾಗಿ ಸಕ್ಸಸ್ ಸಿಗಲಿಲ್ಲ. ಬಳಿಕ ಮಾಸ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಾ ಹೋದರು. 'ಸಾರಥಿ', 'ಬುಲ್‌ಬುಲ್', 'ನವಗ್ರಹ', 'ಯಜಮಾನ' ಹೀಗೆ ಹಲವು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದವು.

ಪೌರಾಣಿಕ, ಐತಿಹಾಸಿಕ ಪಾತ್ರ

ಆರಂಭದಲ್ಲಿ ಒಂದಷ್ಟು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸೋ ಪ್ರಯತ್ನ ಮಾಡಿದ ದರ್ಶನ್ ಬಳಿಕ ಅಂತಹ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇನ್ನು ಮಾಸ್ ಬಿಟ್ರೆ ದರ್ಶನ್ ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲಿ ಸಕ್ಸಸ್ ಕಂಡರು. 'ಕ್ರಾಂತಿ ವೀರಸಂಗೊಳ್ಳ ರಾಯಣ್ಣ' ಆಗಿ 11 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿದ್ದರು. 'ಕುರುಕ್ಷೇತ್ರ' ಸಿನಿಮಾದಲ್ಲಿ ದುರ್ಯೋಧನನಾಗಿ ಅಬ್ಬರಿಸಿ ಗೆದ್ದರು. ಆದರೆ ದರ್ಶನ್ ನಟಿಸಬೇಕಿದ್ದ 'ಸಿಂಧೂರ ಲಕ್ಷ್ಮಣ', 'ರಾಜಾವೀರ ಮದಕರಿ ನಾಯಕ' ಸಿನಿಮಾಗಳು ಕಾರಣಾಂತರಗಳಿಂದ ನಿಂತು ಹೋಗಿವೆ.

ಅಭಿಮಾನಿಗಳ ಸಂಭ್ರಮಾಚರಣೆ

ದರ್ಶನ್ ಚಿತ್ರರಂಗದಲ್ಲಿ 26 ವರ್ಷ ಪೂರೈಸಿದ ಸಂಭ್ರಮವನ್ನು ಅಭಿಮಾನಿಗಳ ಆಚರಿಸುತ್ತಿದ್ದಾರೆ. ಸ್ಪೆಷಲ್ ಡಿಸಿಪಿ ಡಿಸೈನ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಎದೆ ಮೇಲೆ 'ನನ್ನ ಪ್ರೀತಿಯ ಸೆಲೆಬ್ರಿಟೀಸ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ನನ್ನ ಎದೆಯಲ್ಲಿ ನನ್ನ ಅಭಿಮಾನಿಗಳು ಇದ್ದಾರೆ ಎಂದು ಸಾರಿ ಹೇಳಿದ್ದರು. ಅಭಿಮಾನಿಗಳು ಅದೇ ಅರ್ಥದಲ್ಲಿ ಸಿಡಿಪಿ ಡಿಸೈನ್ ಮಾಡಿದ್ದು ವೈರಲ್ ಆಗುತ್ತಿದೆ. ಸದ್ಯ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Darshan celebrates his 26 years mark in Kannada Film Industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X