»   » ನಾಯಿನೆರಳು, ಆದಿನಗಳು ದೆಹಲಿಯಲ್ಲಿ ಪ್ರದರ್ಶನ

ನಾಯಿನೆರಳು, ಆದಿನಗಳು ದೆಹಲಿಯಲ್ಲಿ ಪ್ರದರ್ಶನ

Subscribe to Filmibeat Kannada

ನವದೆಹಲಿ, ಸೆ. 27: ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ದೆಹಲಿ ಕರ್ನಾಟಕ ಭವನದ ಜಂಟಿ ಆಯೋಜನೆಯಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಕಥೆ ಆಧರಿಸಿದ, ಚೈತನ್ಯ ನಿರ್ದೇಶನದ 'ಆದಿನಗಳು 'ಚಿತ್ರ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ ಪವಿತ್ರಾ ಲೋಕೇಶ್ ಅಭಿನಯಿಸಿರುವ 'ನಾಯಿನೆರಳು' ಪ್ರಶಸ್ತಿ ವಿಜೇತ ಚಿತ್ರಗಳು ಸೆ. 28 ರಂದು ದೆಹಲಿ ಕರ್ನಾಟಕ ಭವನದಲ್ಲಿ ಪ್ರದರ್ಶನಗೊಳ್ಳಲಿವೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಓಶಿಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಸರವಳ್ಳಿ ಅವರ ಗುಲಾಬಿ ಟಾಕೀಸ್ ಪ್ರದರ್ಶನಗೊಂಡು, ತೀರ್ಪುಗಾರರ ಹಾಗೂ ಪ್ರೇಕ್ಷಕರ ಮನ್ನಣೆ ಗಳಿಸಿತ್ತು. ಯುವ ನಿರ್ದೇಶಕ ಅಭಯಸಿಂಹ ನಿರ್ದೇಶನದ ಪ್ರಥಮ ಚಿತ್ರ ಗುಬ್ಬಚ್ಚಿಗಳು ಕೂಡ ದೆಹಲಿಯಲ್ಲೇ ಮೊದಲ ಪ್ರದರ್ಶನ ಕಂಡಿದ್ದು. ಈಗ ಗುಬ್ಬಚ್ಚಿಗಳು ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದೆ. ಈ ರೀತಿಯ ಸದಭಿರುಚಿ ಚಿತ್ರಗಳು ದೆಹಲಿಯಲ್ಲೇ ಮೊದಲ ಪ್ರದರ್ಶನಗೊಂಡು ನಂತರ ಕರ್ನಾಟಕಕ್ಕೆ ಕಾಲಿಡುತ್ತಿರುವುದು ಇತ್ತೀಚಿನ ಬೆಳವಣಿಗೆ.

ದಿನಾಂಕ: 28/09/08

ಚಿತ್ರ: ಆ ದಿನಗಳು
ಸಮಯ: 3.30

ಚಿತ್ರ: ನಾಯಿನೆರಳು
ಸಮಯ: ಸಂಜೆ 6.30

ಸ್ಥಳ: ದೆಹಲಿ ಕರ್ನಾಟಕ ಭವನ
ಸೆ. 12. ರಾವ್ ತುಲಾರಂ ಮಾರ್ಗ್
ನವದೆಹಲಿ-110022

ಹೆಚ್ಚಿನವಿವರಗಳಿಗೆ ಸಂಪರ್ಕಿಸಿ:
ಉಪ ನಿರ್ದೇಶಕರು,
ಕರ್ನಾಟಕ ವಾರ್ತಾ ಇಲಾಖೆ .
ಸಂಚಾರವಾಣಿ:99686 52139

(ದಟ್ಸ್ ಕನ್ನಡ ಸಭೆ ಸಮಾರಂಭ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada