ಸಾರಥಿ ಯಶಸ್ಸಿನ ನಂತರ 'ಚಿಂಗಾರಿ' ಯಾದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಂಪೂರ್ಣ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸಾರಥಿ ಚಿತ್ರದ ಜೈತ್ರಯಾತ್ರೆ ಮುಗಿಸಿ, ಅಭಿಮಾನಿಗಳ ಪ್ರೀತ್ಯಾದರಗಳಿಂದ ಖುಷಿ ಪಟ್ಟಿದ್ದಾರೆ.
ಮೈಸೂರಿಗೆ ಇನ್ನೂ ಸಾರಥಿ ರೋಡ್ ಶೋ ಬಂಡಿ ಸಾಗಬೇಕಿತ್ತು. ಬಹುಶಃ ನ.15 ಹಾಗೂ ನ.16 ರಂದು ಮೈಸೂರಿಗೆ ತೆರಳಿ ಭರ್ಜರಿ ಸ್ಟೇಜ್ ಶೋ ನೀಡುವ ಬಯಕೆ ದರ್ಶನ್ ಗಿದೆ.
ದರ್ಶನ್ ಗೆ ಈಗ ಮಾನಸಿಕ ನೆಮ್ಮದಿಯಂತೂ ಸಿಕ್ಕಿದೆ. ಇನ್ನು ತಮ್ಮ ಒಳಗಿರುವ ಪ್ರತಿಭೆಯನ್ನು ಹೊರಚೆಲ್ಲಿ ನಟಿಸಬೇಕಿದೆ. ಹಲವು ದಿನಗಳ ಬ್ರೇಕ್ ನಂತರ ಮೈಚಳಿ ಬಿಟ್ಟು ನಟಿಸುವುದು ತುಸು ಕಷ್ಟ ಎಂಬ ಸತ್ಯ ದರ್ಶನ್ ಗೂ ಇದೆ.
ಆದರೆ, ಮಂಡ್ಯ ಅಭಿಮಾನಿಗಳ ಮುಂದೆ ಮಂಡಿಯೂರಿದ ನಂತರ ಮನಸ್ಸು ಸ್ಥಿರವಾಗಿದೆ ಎಂದು ದರ್ಶನ್ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಸಾರಥಿ ಬಾಕ್ಸಾಫಿಸ್ ಭರ್ಜರಿ ಕಲೆಕ್ಷನ್ ನಂತರ ದರ್ಶನ್ ಮುಂದಿನ ನಡೆ ಏನು? ಯಾವಾಗಿಂದ ಮತ್ತೆ ಶೂಟಿಂಗ್ ಗೆ ಬರುತ್ತಾರೆ? ಮತ್ತೆ ಹಿಂದಿನಂತೆ ನಟಿಸಲು ಸಾಧ್ಯವೇ? ಎಂಬ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ? ಇದಕ್ಕೆ ಅಲ್ಪಸ್ವಲ್ಪ ಉತ್ತರ ನಮಗೆ ಸಿಕ್ಕಿದೆ.
ದರ್ಶನ್ ಜೈತ್ರಯಾತ್ರೆ ನಂತರ ಸಂತಸ ಯಾತ್ರೆ ಯಾವ ಕಡೆ ಸಾಗಲಿದೆ ಮುಂದೆ ನೋಡಿ...


Click it and Unblock the Notifications











