»   » ಸುರೇಶ್ ಅವರನ್ನು ಅಂಬರಕ್ಕೇರಿಸಿದ ಸ್ಲಂ ಬಾಲ

ಸುರೇಶ್ ಅವರನ್ನು ಅಂಬರಕ್ಕೇರಿಸಿದ ಸ್ಲಂ ಬಾಲ

Subscribe to Filmibeat Kannada
actor, director b suresha
'ಸ್ಲಂ ಬಾಲ" ಚಿತ್ರದಿಂದ ಯಾರಿಗೆ ಲಾಭವಾಯಿತೊ ಗೊತ್ತಿಲ್ಲ. ಬಿ.ಸುರೇಶ್ ಅವರಿಗಂತೂ ಲಾಭವಾಗಿದೆ. ಚಿತ್ರದಲ್ಲಿನ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನೋಡುಗರನ್ನು ಮಾತ್ರವಲ್ಲ, ಸುರೇಶ್‌ರ ಅಭಿನಯ ಉದ್ಯಮವನ್ನೂ ಮರುಳು ಮಾಡಿದೆ. ಇಷ್ಟುದಿನ, ಮುಖ ಕೊಟ್ಟು ಮಾತನಾಡದ ಮಂದಿ ಕೂಡ 'ನಮ್ಮ ಚಿತ್ರದಲ್ಲೊಂದು ಪಾತ್ರವಿದೆ, ಮಾಡಿ" ಎಂದು ಸುರೇಶ್‌ಗೆ ದುಂಬಾಲು ಬಿದ್ದಿದ್ದಾರಂತೆ.

ಅವಕಾಶಗಳ ಹೆಚ್ಚಳದಿಂದ ಸುರೇಶ್ ಉಬ್ಬಿಹೋಗಿಲ್ಲ. ಬಂದ ಅವಕಾಶಗಳನ್ನು ಬಾಚಿಕೊಳ್ಳುವ ಅವಕಾಶವಾದಿ ಉತ್ಸಾಹವೂ ಅವರಲ್ಲಿಲ್ಲ. ಅವರದು ಆತ್ಮಾವಲೋಕನದ ಮನಸ್ಸು. ಊರೆಲ್ಲ ಭಲೇ ಭಲೇ ಎನ್ನುತ್ತಿದ್ದರೂ, 'ಸ್ಲಂ ಬಾಲ"ದಲ್ಲಿನ ನಿರ್ವಹಣೆ ಅವರಿಗೆ ಅಂಥ ತೃಪ್ತಿಯೇನೂ ತಂದಿಲ್ಲ. ಇನ್ನೂ ಚೆನ್ನಾಗಿ ಅಭಿನಯಿಸಬೇಕಿತ್ತು ಎನ್ನುವುದವರ ಅನಿಸಿಕೆ. ಪಾತ್ರದ ಮೇಲೆ ತಮ್ಮ ರಂಗಭೂಮಿಯ ನೆರಳು ಬಿದ್ದಿದೆ, ತಮ್ಮ ಪಾತ್ರ ನಿರ್ವಹಣೆಯಲ್ಲಿ ವಿಪರೀತ ನಾಟಕೀಯತೆಯಿದೆ ಎಂದೂ ಅವರಿಗೆ ಅನ್ನಿಸಿದ್ದಿದೆ.
ಹಾಂ, ಸುರೇಶ್ ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರ 'ಮುರಾರಿ". ವಾಸು ನಿರ್ದೇಶನದ ಈ ಚಿತ್ರದ ನಾಯಕ ಶ್ರೀಮುರಳಿ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada