ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರ ಒಗ್ಗಟ್ಟು

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶಿವಣ್ಣ ಜೊತೆ 'ಅಣ್ಣ ತಂಗಿ' ಚಿತ್ರ ಮಾಡಿದ್ದ ಕೆ ಪ್ರಭಾಕರ್ ಚಿತ್ರದ ನಿರ್ಮಾಪಕರು. ಚಿತ್ರದ ಶೀರ್ಷಿಕೆ 'ಒಗ್ಗಟ್ಟು'. ಇದೊಂದು ಬಹುತಾರಾಗಣದ ಚಿತ್ರ.

'ಒಗ್ಗಟ್ಟು' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಕೆ ಮಾದೇಶ್. ಹುಡುಗರು ಚಿತ್ರದಲ್ಲಿ ಪುನೀತ್ ಜೊತೆ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗೀಶ್ ಅಭಿನಯಿಸಿದ್ದರು. ಈಗ ಇದೇ ಜೋಡಿ ಶಿವಣ್ಣನ ಜೊತೆ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಇವರದು ಸಹೋದರರ ಪಾತ್ರ.

ಚಿತ್ರದ ಹೆಸರೇ ಹೇಳುವಂತೆ ಇದೊಂದು ಕುಟುಂಬ ಪ್ರಧಾನ ಚಿತ್ರ. ಅಭಿಷೇಕ್ ಅವರ ಕತೆ ಚಿತ್ರಕ್ಕಿದೆ. ಅಣ್ಣತಮ್ಮಂದಿರ ನಡುವಿನ ಒಗ್ಗಟ್ಟೇ ಚಿತ್ರದ ಕಥಾವಸ್ತು. ಸದ್ಯಕ್ಕೆ ಶಿವಣ್ಣ ಕೈಯಲ್ಲಿ ಶಿವ, ಲಕ್ಷ್ಮಿ, ಅಂದರ್ ಬಾಹರ್ ಚಿತ್ರಗಳಿವೆ. ಇವೆಲ್ಲವೂ ಮುಗಿದ ಬಳಿಕವಷ್ಟೇ 'ಒಗ್ಗಟ್ಟು' ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್)

More from Filmibeat

English summary
Century Star Shivarajkumar new movie under the direction of K Madesh, it has been named as Oggattu. Srinagara Kitty, Yogish and Shivarajkumar are teams up in Oggattu. The movie is being produced by K. Prabhakar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X