ಇದು ಶಿವಣ್ಣ, ದುನಿಯಾ ಸೂರಿ ಕಡ್ಡಿಪುಡಿ ಸಮಾಚಾರ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೊಂದಿಗಿನ ದುನಿಯಾ ಸೂರಿ ಚಿತ್ರ ಎಲ್ಲಿಗೆ ಬಂತು. ಸದ್ಯಕ್ಕೆ ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಎಲ್ಲವೂ ಒಂದು ಹಂತಕ್ಕೆ ಬಂದಿವೆ. ಇನ್ನು ಎಲೆ ಅಡಿಕೆ ಜೊತೆ ಕಡ್ಡಿಪುಡಿ ಜಗಿಯುವುದೊಂದೆ ಬಾಕಿ. ಚಿತ್ರದ ಹೆಸರು ಗೊತ್ತೆ ಇದೆಯಲ್ಲಾ 'ಕಡ್ಡಿಪುಡಿ'. ಇತ್ತೀಚೆಗೆ ಶಿವಣ್ಣ ಕಡ್ಡಿಪುಡಿಗೆ ಸಹಿ ಹಾಕಿದ್ದಾರೆ.
ದುನಿಯಾ ಸೂರಿ ಈಗ ಪುನೀತ್ ಜೊತೆ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಲಿದ್ದು, ಅದು ಮುಗಿದ ಬಳಿಕವಷ್ಟೆ 'ಕಡ್ಡಿಪುಡಿ'ಗೆ ಮುಹೂರ್ತ. ಏನಿಲ್ಲಾ ಅಂದರೂ ಇನ್ನೂ ಎಂಟು ತಿಂಗಳು ಸಮಯ ಬೇಕಾಗುತ್ತದೆ 'ಕಡ್ಡಿಪುಡಿ' ಸೆಟ್ಟೇರಲು.
ಅಂದಹಾಗೆ 'ಕಡ್ಡಿಪುಡಿ'ಗೆ ನಿರ್ಮಾಪಕರು 'ಸ್ವಯಂವರ' ಚಂದ್ರು. ಚಿತ್ರಕ್ಕೆ ನಾಯಕಿ ಗೋಲ್ಡನ್ ಗರ್ಲ್ ರಮ್ಯಾ ಎನ್ನಲಾಗಿತ್ತು. ಆದರೆ ಈಗ ಬಾಲಿವುಡ್ ಬೆಡಗಿಯನ್ನು ಕರೆತರುವುದಾಗಿ ಸ್ವಯಂವರ ಚಂದ್ರು ಹೇಳಿದ್ದಾರೆ. ಇದಿಷ್ಟು ಸದ್ಯದ 'ಕಡ್ಡಿಪುಡಿ' ಸಮಾಚಾರ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Duniya and Jackie fame successful director Soori s all set to direct Shivaraj Kumar in a new film called Kaddipudi. However, fans of both Soori and Shivanna will have to wait for another eight months, as Soori will start his other film with Puneeth Rajkumar in September first.
ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ದುನಿಯಾ ಸೂರಿ ರಮ್ಯಾ shiva rajkumar duniya soori hat trick hero puneet ramya


Click it and Unblock the Notifications











