»   » ಐತಿಹಾಸಿಕ ನಗರಿಗಳಲ್ಲಿ ಸುದೀಪ್ ನರ್ತನ

ಐತಿಹಾಸಿಕ ನಗರಿಗಳಲ್ಲಿ ಸುದೀಪ್ ನರ್ತನ

Posted By:
Subscribe to Filmibeat Kannada

'ವೀರ ಮದಕರಿಯ ಚಾಣಕ್ಷತನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ ಈಗ ಆತ ಪ್ರಾಯಾವಸ್ಥೆಗೆ ಬಂದ ಸಮಯ. ಹಾಗಾಂತ ಆತನೇ ಹಾಡಿನ ಮೂಲಕ ಹೇಳಿಕೊಂಡಿದ್ದಾನೆ.

'ಜುಂಜುಂ ಮಾಯ ಜುಂಜುಂ ಮಾಯ ...ಪ್ರಾಯ ಬಂದ್ರೆ ಏನಿದು ಮಾಯ' ಎಂದು ಕವಿರಾಜ್ ಬರೆದಿರುವ ಗೀತೆಗೆ ನಾಯಕಿ ರಾಗಿಣಿಯೊಂದಿಗೆ ಸುದೀಪ್ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯ ಸುಂದರ ಪರಿಸರದಲ್ಲಿ ಹೆಜ್ಜೆಹಾಕಿದ್ದಾರೆ. ಪ್ರತಾಪ್‌ಆಂತೋನಿ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ

ಸುಮಾರು ಏಳು ದಿನಗಳ ಕಾಲ 'ವೀರ ಮದಕರಿಗೆ ಈ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಯಿತು. ಈ ಸಮಯದಲ್ಲಿ ಚಿತ್ರೀಕರಣ ವಿಕ್ಷಣೆಗೆ ಸೇರುತ್ತಿದ್ದ ಮಂದಿ ಸುಮಾರು 800ಕ್ಕೂ ಅಧಿಕ. ಸುದೀಪ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಈ ಜನರನ್ನು ತಡೆಗಟ್ಟಲು ಪೊಲೀಸರು ಹರಸಾಹಸ ಪಡಬೇಕಾಯಿತು. ದಿನೇಶ್‌ಗಾಂಧಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸುತ್ತಿದ್ದಾರೆ.

ಮೈಆಟೋಗ್ರಾಫ್ ಹಾಗೂ ನಂ73ಶಾಂತಿನಿವಾಸ ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಸುದೀಪ್‌ಗೆ ಇದು ಮೂರನೇ ಚಿತ್ರ. ಕೀರವಾಣಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್‌ರಾಜ್ ಸಹನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ದಿನೇಶ್‌ಗಾಂಧಿ, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಮುಂತಾದವರಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ
ಚೋರ ಗುರು ಮದಕರಿಗೆ ಸಿಕ್ತು ಗೋದಾಮು
ಚಾಣಾಕ್ಷ ವೀರ ಮದಕರಿ ಮಗುವಿಗೆ ಹೆದರಿನಂತೆ!!
ಸುದೀಪ್‌ ದ್ವಿಪಾತ್ರದ ಮತ್ತೊಂದು ಚಿತ್ರ 'ವೀರ ಮದಕರಿ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada