ಪುನೀತ್ ಜೊತೆ ಅಭಿನಯದ ಕನಸಾಯ್ತು ನನಸು

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಮಾತಾನಾಡುವ ಹರ್ಷಿಕಾ "ನಾನು ಪಿಯುಸಿ ಓದುತ್ತಿರುವಾಗ ಚಿತ್ರರಂಗಕ್ಕೆ ಬಂದೆ. ಓದಿನ ಜೊತೆ ಇಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡೂ ಕಡೆ ಬ್ಯಾಲೆನ್ಸ್ ಮಾಡಿದೆ. ನಂತರ ಇಂಜಿನಿಯರಿಂಗ್ ಓದುವಾಗ ಕೂಡ ಓದಿಗೇ ಹೆಚ್ಚು ಮಹತ್ವ ಕೊಟ್ಟೆ. ಈಗ ಇಂಜಿನಯರಿಂಗ್ ಮುಗಿದಿದೆ.
ಇನ್ನು ನನಗೆ ಈ ಮೊದಲಿನಂತೆ ಎರಡು ದೋಣಿಯ ಪ್ರಯಾಣದ ಆಯಾಸವಿಲ್ಲ. ನನಗೆ ಇಷ್ಟವಾದ ಪಾತ್ರಗಳು ಬಂದರೆ ನಟನೆ ಮುಂದುವರಿಸುತ್ತೇನೆ. ಇಲ್ಲದಿದ್ದರೆ ಇಂಜಿನಿಯರಿಂಗ್ ಪದವಿ ಇದ್ದೇ ಇದೆ. ನನಗೆ ಯಾವ ಕೆಲಸ ಮಾಡಲೂ ಸಂಕೋಚವಿಲ್ಲ" ಎಂದು ನಿರ್ಭಿಡೆಯಿಂದ ಮಾತನಾಡುವ ಹರ್ಷಿಕಾರನ್ನು ಮಾತಿನ ಮೂಲಕವೇ 'ಕೊಡಗಿನ ಹುಡುಗಿ' ಎಂದು ಅರ್ಥೈಸಿಕೊಳ್ಳಬುಹುದು. (ಒನ್ ಇಂಡಿಯಾ ಕನ್ನಡ)
English summary
Kannada Actress Harshika Poonachcha entered sandalwood from the movie PUC. She told her memorable movie is 'Jackie' with Puneet Rajukumar.


Click it and Unblock the Notifications