ದುಬೈ ಶೇಖ್ ಜೊತೆ ಕಾಮ್ನಾ ಜೇಠ್ಮಲಾನಿ ಮದುವೆ
ಬೆಚ್ಚನೆ ಕೆನ್ನೆಗಳ ಚೆಲುವೆ ಕಾಮ್ನಾ ಜೇಠ್ಮಲಾನಿಗೆ ಕಂಕಣಭಾಗ್ಯ ಕೂಡಿಬಂದಿದೆ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಕಾಮ್ನಾ ಮದುವೆಯಾಗಲಿರುವುದು ದುಬೈ ಶೇಖ್ ಒಬ್ಬರನ್ನು.
ಈ ದುಬೈ ಶೇಖ್ ಅಂತಿಂಥವನಲ್ಲ. ತಾನು ಮದುವೆಯಾಗುವ ಹುಡುಗಿಗಾಗಿ 'ಸ್ವಯಂವರ' ಕಾರ್ಯಕ್ರಮವನ್ನೇ ಏರ್ಪಡಿಸಿದ್ದ. ಯುಎಸ್ ಟಿವಿಯಲ್ಲಿ ಈತನ ಸ್ವಯಂವರ ಕಾರ್ಯಕ್ರಮ ಪ್ರಸಾರವಾಗಿ ಕಡೆಗೆ ಈತ ಕಾಮ್ನಾ ಜೇಠ್ಮಲಾನಿಯನ್ನು ಓಕೆ ಮಾಡಿದ್ದಾನೆ.
ಅರಬ್‌ನ ಆಗರ್ಭ ಶ್ರೀಮಂತನಾದ ಈತನನ್ನು ವರಿಸಲು ಸಾಲು ಸಾಲು ಯುವತಿಯರು ಕ್ಯೂ ನಿಂತಿದ್ದರು. ಅವರನ್ನೆಲ್ಲಾ ಬದಿಗೊತ್ತಿ ಕಾಮ್ನಾರಿಗೆ ಹಾರ ಹಾಕಿದ್ದಾನೆ ಶೇಖ್. ಈತನೊಂದಿಗೆ ಯಾರಿಗೂ ಗೊತ್ತಿಲ್ಲದಂತೆ ಮದುವೆಯಾಗಲು ಕಾಮ್ನಾ ಸಿದ್ಧತೆ ನಡೆಸಿದ್ದಳು. ಆದರೆ ಗುಟ್ಟು ರಟ್ಟಾಗಿದೆ.
ಸದ್ಯಕ್ಕೆ ಕಾಮ್ನಾಗೆ ಕೈಯಲ್ಲಿ ಕೆಲಸವಿಲ್ಲ. ಯುಎಸ್‌ನಲ್ಲಿ ಸುತ್ತುತ್ತಾ ಶೇಖ್ ಕಣ್ಣಿಗೆ ಬಿದ್ದಿದ್ದಾರೆ. ಒಂದು ಮೂಲದ ಪ್ರಕಾರ ಈಗಾಗಲೆ ಶೇಖ್ ಮತ್ತು ಕಾಮ್ನಾಗೆ ಮದುವೆಯಾಗಿದೆ ಎಂಬ ಗುಮಾನಿಯೂ ಇದೆ. ಅದೇನೇ ಇರಲಿ ನಮ್ಮ ರವಿಮಾಮನ ಜೊತೆ 'ಉಗಾದಿ' ಚಿತ್ರದಲ್ಲಿ ಕಾಮ್ನಾ ಅಭಿನಯಿಸಿದ್ದನ್ನು ಧಾರಾಳವಾಗಿ ಇಲ್ಲಿ ಸ್ಮರಿಸಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











