ಬೆಳಗಾವಿಯಲ್ಲಿ ಬಿಂದಾಸ್ ಬೆಡಗಿ ನಿಖಿತಾ ತುಕ್ರಲ್

By Rajendra

ಕನ್ನಡ ಚಲನಚಿತ್ರೋದ್ಯಮದ ಭಾರಿ ಬಜೆಟ್‌ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಈ ಚಿತ್ರದ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದೆ. ಬೆಳಗಾವಿ, ಗೋಕಾಕ್, ಮಂದಗಡ, ಗೋಗಿಹಳ್ಳ, ಗೊಡಚಿನ ಮಲ್ಕಿ, ಎಲ್ಲೂರು ಗಡ, ಕುರಿವಿನ ಕೊಪ್ಪ, ಹಣಸಿಕಟ್ಟಿ, ಬಾದಾಮಿ, ಪಟ್ಟದಕಲ್ಲು ಪ್ರದೇಶಗಳಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿತಾ ತುಕ್ರಲ್ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ. ಬಹುಭಾಷಾ ತಾರೆ ಜಯಪ್ರದಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು ಬರೋಬ್ಬರಿ ರು.12 ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ ಆನಂದ್ ಅಪ್ಪುಗೋಳ್.

ಶಶಿಕುಮಾರ್, ಶ್ರೀನಿವಾಸಮೂರ್ತಿ, ಶೋಭಾರಾಜ್, ಉಮಾಶ್ರೀ, ದೊಡ್ಡಣ್ಣ, ಸಿಆರ್ ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮಾ, ಸತ್ಯಜಿತ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಆನಂದ್ ಬಿ ಅಪ್ಪುಗೋಲ್ ನಿರ್ಮಿಸುತ್ತಿರುವ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೀಘ್ರದಲ್ಲೆ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
Challenging Star Darshan and Nikita Thukral starrer 'Kranthiveera Sangolli Raayann' shooting is on at a brisk pace. Action sequences were picturised on Darshan and Nikita in Belgaum surroundings. This is an epic story of the warrior Sangolli Rayanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X