For Quick Alerts
  ALLOW NOTIFICATIONS  
  For Daily Alerts

  ಅಣ್ಣಾಬಾಂಡ್ ಮಂಗಳವಾರ; ಎಲ್ಲೆಡೆ ಬಿಸಿಬಿಸಿ ಚರ್ಚೆ

  |
  <ul id="pagination-digg"><li class="next"><a href="/news/27-tuesday-release-annabond-movie-puneeth-aid0172.html">Next »</a></li></ul>

  ಪವರ್ ಸ್ಟಾರ್ ಪುನೀತ್ ಅಭಿನಯದ 'ಅಣ್ಣಾಬಾಂಡ್' ಚಿತ್ರದ ಬಿಡುಗಡೆ ಮೇ 1, 2012 ಘೋಷಣೆಯಾಗಿರುವುದು ಎಲ್ಲರಿಗೂ ಗೊತ್ತು. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಬಿಡುಗಡೆಯಾಗುವುದು ಶುಕ್ರವಾರಗಳಂದು. ಸಾಕಷ್ಟು ವರ್ಷಗಳ ಹಿಂದೆ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದದ್ದು ಗುರುವಾರದಂದೇ. ಆದರೆ ಶುಕ್ರವಾರ ಶುಭ ಎಂಬ ಕಾರಣಕ್ಕೆ ಗುರುವಾರದ ಬದಲಾಗಿ ಶುಕ್ರವಾರ ಬಿಡುಗಡೆ ಸಂಪ್ರದಾಯವಾಗಿದೆ.

  ಆದರೆ ಡಾ ರಾಜ್ ಕುಟುಂಬದ ಚಿತ್ರಗಳು ಗುರುವಾರಗಳಂದು (ರಾಯರ ದಿನ ಎಂಬ ಕಾರಣಕ್ಕೆ) ಬಿಡುಗಡೆಯಾಗುವ ಸಂಪ್ರದಾಯವಿದೆ. ಅದಕ್ಕೆ ಹೊರತಾಗಿ 1989 ರಲ್ಲಿ ಮಾಲಾಶ್ರೀ-ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಚಿತ್ರ 'ನಂಜುಂಡಿ ಕಲ್ಯಾಣ' ಬುಧವಾರದಂದು ಬಿಡುಗಡೆಯಾಗಿತ್ತು. ಆದರೆ ಕನ್ನಡ ಚಿತ್ರವೊಂದು ಮಂಗಳವಾರ ಬಿಡುಗಡೆ ಕಾಣುತ್ತಿರುವುದು ಇದೇ ಮೊದಲು.

  'ಮೇ 1 ಕಾರ್ಮಿಕರ ದಿನ. ಅವರೆಲ್ಲರೂ ನಮ್ಮ ಚಿತ್ರ ನೋಡಿ ಖುಷಿ ಪಡಲಿ. ಅಣ್ಣಾಬಾಂಡ್ ಚಿತ್ರ ಕಾರ್ಮಿಕರಿಗೆ ಅರ್ಪಣೆ' ಎಂದಿದ್ದಾರೆ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್. ವಜ್ರೇಶ್ವರಿ (ಹೋಮ್ ಬ್ಯಾನರ್) ಸಂಸ್ಥೆಯ ಈ ಚಿತ್ರ ಪುನೀತ್ ವೃತ್ತಿಜೀವನವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದೆ, ಜಾಕಿ ದಾಖಲೆಯನ್ನು ಮುರಿಯಲಿದೆ ಎನ್ನಲಾಗುತ್ತಿದೆ. ಮುಂದಿನ ಪುಟ ನೋಡಿ......

  <ul id="pagination-digg"><li class="next"><a href="/news/27-tuesday-release-annabond-movie-puneeth-aid0172.html">Next »</a></li></ul>
  English summary
  Power Star Puneeth Rajkumar's movie 'Annabond' releases on Tuesday, as everybody knows. But, it became Hot Topic for his Fans Discussion. Different opinions coming out for this release. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X