ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರ ಡಬ್ಬ ಸೇರಿತೆ?

By Rajendra

ಆರಕ್ಷಕ' ಚಿತ್ರ ಡಬ್ಬ ಸೇರಿತೆ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಹುಟ್ಟಿ ಹಲವು ದಿನಗಳೇ ಕಳೆದಿವೆ. ಹ್ಯಾಟ್ರಿಕ್ ನಿರ್ದೇಶಕರಾಗಲು ಹೊರಟ ಪಿ.ವಾಸು ತುಂಬಾ ಶ್ರದ್ಧೆಯಿಂದ 'ಆರಕ್ಷಕ'ನನ್ನು ಮಾಡಿದ್ದರು. ಜನವರಿ 26ರಂದು ಸಾಗರ್ ಚಿತ್ರಮಂದಿರದಲ್ಲಿ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು.

ಆದರೆ ಎರಡು ದಿನಗಳ ನಂತರ ಸಿನಿಮಾದಲ್ಲಿ ಗೊಂದಲಗಳು ಜಾಸ್ತಿ ಇವೆ. ತಕ್ಷಣ ಅರ್ಥವಾಗುವುದಿಲ್ಲ ಎಂದು ಕೆಲವು ಪ್ರೇಕ್ಷಕರು ಮೂಗು ಮುರಿದರು. ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಂತೂ ಪಂಚಿಗ್ ಡೈಲಾಗ್ ಇಲ್ಲ. ಇದು ಉಪೇಂದ್ರ ಸಿನಿಮಾವೇ ಅಲ್ಲ ಎಂದರು. ಬಿಡುಗಡೆಯಾದ ನಾಲ್ಕನೇ ವಾರಕ್ಕೆ ಆರಕ್ಷಕ ಚಿತ್ರಮಂದಿರದಿಂದ ಎತ್ತಂಗಡಿಯಾಗಿ ಅಲ್ಲಿಗೆ 'ಲಕ್ಕಿ' ಬಂದು ಕುಳಿತಿದೆ.

ಆರಕ್ಷಕ ಚಿತ್ರದ ರಿಚ್‌ನೆಸ್, ಉಪೇಂದ್ರ ಅಭಿನಯ ಎಲ್ಲದಕ್ಕೂ ಪ್ರೇಕ್ಷಕರು ಫುಲ್ ಮಾರ್ಕ್ಸ ನೀಡಿದ್ದರು. ಆದರೆ ಚಿತ್ರಕಥೆ, ಹಾಡುಗಳು ಜನರಿಗೆ ಇಷ್ಟವಾಗಲಿಲ್ಲ. ಅಂತೂ ಮತ್ತೊಂದು 'ಅ'ಕಾರ ಬರೆಯಲು ಹೊರಟಿದ್ದ ನಿರ್ದೇಶಕ ಪಿ.ವಾಸು ಅವರಿಗೆ ಇದರಿಂದ ಸ್ವಲ್ಪ ಹಿನ್ನಡೆಯಂತೂ ಆಗಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Successful director fame P Vasu's Hat Trick dream shattered. His latest movie Arakshaka with Upendra has been replaced by Ramya and yash lead Lucky, produced by Radhika Kumaraswamy. Araksha movie was being taken out in just four weeks from Sagar theater, Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X