For Quick Alerts
  ALLOW NOTIFICATIONS  
  For Daily Alerts

  'ಬಂಗಾರಿ ಬಾರೇ ನೀ ಬುಲ್ ಬುಲ್...' ಎಂದ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ 'ಚಿಂಗಾರಿ' ಮುಂದಿನ ವಾರ (ಫೆಬ್ರವರಿ 3, 2012) ರಂದು ಬಿಡುಗಡೆ ಆಗಲಿದೆ. ಸಂಗೊಳ್ಳಿ ರಾಯಣ್ಣ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈಗ ದರ್ಶನ್ ಹುಟ್ಟುಹಬ್ಬದಂದು ಹೊಸ ಚಿತ್ರ ಸೆಟ್ಟೇರಲಿದ್ದು ಹೆಸರು 'ಬುಲ್ ಬುಲ್'. ಎಂ ಡಿ ಶ್ರೀಧರ್ ನಿರ್ದೆಶನದ ಈ ಚಿತ್ರದ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ.

  ಕನ್ನಡದ ಹುಡುಗಿ ಅನುಷ್ಕಾ ಪ್ರಸಿದ್ಧಿ ಪಡೆದದ್ದು ನೆರೆಯ ಭಾಷೆ ಆಂಧ್ರದಲ್ಲಿ ಅರುಂಧತಿ ಚಿತ್ರದ ಮೂಲಕ. ದಕ್ಷಿಣ ಭಾರತದ ಪ್ರಸಿದ್ಧ ತಾರೆಯಾಗಿ ಮೆರೆಯುತ್ತಿದ್ದರೂ ಅದ್ಯಾಕೋ ಕನ್ನಡದಲ್ಲಿ ನಟಿಸುವ ಕಾಲ ಕೂಡಿ ಬಂದಿರಲಿಲ್ಲ. ಈಗ ಬುಲ್ ಬುಲ್ ಚಿತ್ರತಂಡ "ಬಂಗಾರಿ ಬಾರೇ ನೀ ಬುಲ್ ಬುಲ್..."ಎನ್ನುತ್ತಿದೆ. ಅನುಷ್ಕಾ ಸದ್ಯಕ್ಕೆ ಡೇಟ್ಸ್ ಕೊಟ್ಟಿಲ್ಲವಾದರೂ ಕೊಡಲಿದ್ದಾರೆ ಎನ್ನುತ್ತಿವೆ ಮೂಲಗಳು.

  ತೂಗುದೀಪ ಪ್ರೊಡಕ್ಷನ್ ಅಡಿಯಲ್ಲಿ ದರ್ಶನ್ ತಮ್ಮ, 'ಸಾರಥಿ' ನಿರ್ದೆಶಕ ದಿನಕರ್ ಈ ಚಿತ್ರದ ಪ್ರಧಾನ ನಿರ್ಮಾಪಕರು. ಅವರಿಗೆ ಚಿತ್ರದಲ್ಲಿ ಹಾಗೂ ನಿರ್ಮಾಣದಲ್ಲಿ ಜೊತೆಯಾಗಲಿರುವವರು ವಿ. ಹರಿಕೃಷ್ಣ (ಸಂಗೀತ), ಕೃಷ್ಣ ಕುಮಾರ್ (ಕ್ಯಾಮರ್), ಕವಿರಾಜ್ (ಸಾಹಿತ್ಯ), ಎಂ ಡಿ ಶ್ರೀಧರ್ (ನಿರ್ದೇಶನ). ಹಾಗಾಗಿ ದರ್ಶನ್ ಸೇರಿ ಚಿತ್ರತಂಡದ ಯಾರೊಬ್ಬರೂ ಆರಂಭದಲ್ಲಿ ಸಂಭಾವನೆ ಪಡೆಯುತ್ತಿಲ್ಲ, ಬದಲಿಗೆ ಬಿಡುಗಡೆ ನಂತರ ಬರುವ ಲಾಭದಲ್ಲಿ ಎಲ್ಲರೂ ಹಂಚಿಕೊಳ್ಳಲಿದ್ದಾರೆ.

  ನಾಯಕಿಯಾಗಿ ಅನುಷ್ಕಾ ಶೇಟ್ಟಿ ಬಂದರೆ ಬುಲ್ ಬುಲ್ ತಂಡ ಪ್ರಾರಂಭದಲ್ಲೇ ದಾಖಲೆ ಮಾಡಲಿದೆ. ಅನುಷ್ಕಾ ಬರದಿದ್ದರೆ ಕಾಜಲ್ ಅಗರವಾಲ್ ಗೆ 'ಗಾಳ ರೆಡಿಯಿದೆ. ಅವರಿಬ್ಬರೂ ಸಿಗದಿದ್ದರೆ ಇನ್ಯಾರೋ! ಹೋಮ್ ಪ್ರೊಡಕ್ಷನ್ ಆದ್ದರಿಂದ ಚಿತ್ರತಂಡದ ಆಯ್ಕೆಯೂ ಗುಟ್ಟಾಗಿದೆ. ಅನುಷ್ಕಾ ಶೆಟ್ಟಿ ಬಂದರೆ ಲಾಭವೂ ಬಂದಂತೆ ಎಂಬುದು ಚಿತ್ರತಂಡದ ಅಭಿಪ್ರಾಯ ಇರಬಹುದೇ? (ಒನ್ ಇಂಡಿಯಾ ಕನ್ನಡ)

  English summary
  Challenging Star Darshan upcoming movie 'Bul Bul' to set on his Birthday, 16th Feb. 2012. The movie Heroine will be 'Anushka Shetty' as the source is concerned. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X