ದರ್ಶನ್ ಚಿಂಗಾರಿಯಲ್ಲಿ ಭಾವನಾ 'ಸೂಪರ್ ಡಾನ್ಸ್'

ಸ್ಯಾಂಡಲ್ ವುಡ್ ನಿಂದ ಕಳೆದುಹೋಗಿದ್ದ ಕನ್ನಡದ ಪ್ರತಿಭಾವಂತ ನಟಿ ಭಾವನಾ, ಈ ಚಿಂಗಾರಿಗೆ ಜೊತೆಯಾಗಿದ್ದಾರೆ. ಅವರು "ಈ ಚಿತ್ರದಲ್ಲಿ ಪ್ರಮುಖ ಪಾತ್ರ ಹಾಗೂ 2 ಹಾಡುಗಳಿಗೆ ಹೆಜ್ಜೆಹಾಕಿದ್ದಾರೆ. ಒಂದು ಹಾಡಲ್ಲಂತೂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಭಾವನಾರ ಇಂಟ್ರೊಡಕ್ಷನ್ ಸಾಂಗ್ ಕೂಡ ಸಖತ್ತಾಗಿದೆ. ಬಳುಕುವ ಬಳ್ಳಿ ಭಾವನಾರ ಖತರ್ ನಾಕ್ ಸ್ಟೆಪ್ಸ್ ಚಿಂಗಾರಿ ಚಿತ್ರದ ಹೈಲೈಟ್ಸ್ ಗಳಲ್ಲೊಂದು" ಎಂದಿದ್ದಾರೆ ನಿರ್ಮಾಪಕರಾದ ಮಹಾದೇವ್ ಹಾಗೂ ಮನು.
"ಚಿತ್ರದ ಕಥೆ, ದರ್ಶನ್, ದೀಪಿಕಾ ಹಾಗೂ ಭಾವನಾರ ಮ್ಯಾಜಿಕ್, ಪ್ರೇಕ್ಷಕರು ಮತ್ತೆಮತ್ತೆ ಥಿಯೇಟರ್ ಕಡೆ ಬರುವಂತಿದೆ. ಈಗಾಗಲೇ ಚಿಂಗಾರಿಗೆ ಬರೋಬ್ಬರಿ 8 ಕೋಟಿ ಖರ್ಚು ಮಾಡಿದ್ದೇವೆ. ಟಿವಿ ರೈಟ್ಸ್ 2 ಕೋಟಿ ರು. ಬಂದಿದೆ. ಜನವರಿ 2ಕ್ಕೆ ಆಡಿಯೋ ಬಿಡುಗಡೆ ಹಾಗೂ ಜನವರಿ 27ಕ್ಕೆ ಸಿನಿಮಾ ಬಿಡುಗಡೆ ಎಂದು ನಿರ್ಧಾರವಾಗಿದೆ. ಚಿಂಗಾರಿ ಈಗ ಬಂಗಾರ ಬೆಳೆಯುವ ಚಿತ್ರವೆಂದು ಹೇಳಲಾಗುತ್ತಿದೆ. ಮಹಾದೇವ್-ಮನು ದಿಲ್, ಫುಲ್ ಖುಷ್. (ಒನ್ ಇಂಡಿಯಾ ಕನ್ನಡ)
More from Filmibeat
English summary
Challenging Star Darshan upcoming movie Chingari. Kannada actress Bhavana acted and appeared in 2 songs with fully boldness.


Click it and Unblock the Notifications











