For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೆ ಚಿತ್ರಮಂದಿರಗಳಲ್ಲಿ ಪಾರಿಜಾತ ಪರಿಮಳ

  By Rajendra
  |

  ಇಂಪಾದ ಹಾಡುಗಳ ಮೂಲಕ ದಕ್ಷಿಣ ಭಾರತದಲ್ಲೇ ಗಮನಸೆಳೆದಿರುವ ಚಿತ್ರ 'ಪಾರಿಜಾತ'. ಈ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿದ್ದು ದಕ್ಷಿಣದ ಜನಪ್ರಿಯ ಟಾಪ್ 20 ಹಾಡುಗಳಲ್ಲಿ ಸ್ಥಾನ ಪಡೆದಿವೆ. ದಿಗಂತ್ ಹಾಗೂ ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲು ಸಿದ್ಧವಾಗಿದೆ.

  ಈ ವರ್ಷ ದಿಗಂತ್ ಅಭಿನಯದ ಹಲವಾರು ಚಿತ್ರಗಳು ಬಿಡುಗಡೆಯಾಗಿ ಅಷ್ಟೇ ಬೇಗ ಚಿತ್ರಮಂದಿರದಿಂದ ಕಣ್ಮರೆಯಾಗಿದ್ದು ದುರಂತ. ಈಗ ಪಾರಿಜಾತ ಚಿತ್ರದ ಮೇಲೆ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಐಂದ್ರಿತಾ ಹಾಗೂ ದಿಗಂತ್ ಈ ಹಿಂದೆ 'ಮನಸಾರೆ' ಚಿತ್ರದಲ್ಲಿ ಅಭಿನಯಿಸಿದ್ದರು. ದಿಗಂತ್ ಅಭಿನಯದ ಕಾಂಚಾಣ, ತಾರೆ, ಪುತ್ರ, ಲೈಫು ಇಷ್ಟೇನೆ, ಜಾಲಿಬಾಯ್ ಈ ವರ್ಷ ಬಿಡುಗಡೆಯಾದ ಚಿತ್ರಗಳು.

  ಈ ಬಾರಿಯ ದಕ್ಷಿಣದ ಜನಪ್ರಿಯ ಟಾಪ್ 20 ಹಾಡುಗಳಲ್ಲಿ ಸ್ಥಾನ ಸಂಪಾದಿಸಿರುವ ಏಕೈಕ ಕನ್ನಡ ಚಿತ್ರ 'ಪಾರಿಜಾತ' ಎಂಬುದು ಮತ್ತೊಂದು ವಿಶೇಷ. ಶ್ರೀನಿವಾಸ್ ನಿರ್ದೇಶನದ ಈ ಚಿತ್ರವನ್ನು ಪ್ರೇಮ್ ಕುಮಾರ್ ನಿರ್ಮಿಸಿದ್ದಾರೆ. ಮನೋಮೂರ್ತಿ ಸಂಗೀತ ಚಿತ್ರಕ್ಕಿದ್ದು ಪಾರಿಜಾತ ಚಿತ್ರ ಸೂಪರ್ ಹಿಟ್ ಆಗುವ ಎಲ್ಲ ನಿರೀಕ್ಷೆಗಳನ್ನೂ ಹುಟ್ಟಿಸಿದೆ. ಕಾದು ನೋಡೋನ ಏನಾಗುತ್ತದೋ ಏನೋ ಯಾವೋನಿಗೊತ್ತು? (ಒನ್‌ಇಂಡಿಯಾ ಕನ್ನಡ)

  English summary
  Diganth and Aindrita Ray lead film Parijatha all set for release. Already the songs of the movie placed in the top. The song Oh Parijatha and A Chandrika is in the fourth and 12th position respectively place among the South India’s top 20 songs list. Music by Mano Murthy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X