ರಾಹುಲ್ ಮಹಾಜನ್‌ ಪತ್ನಿ ಡಿಂಪಿಗೆ ಗರ್ಭಸ್ರಾವ

By Rajendra

ಕಂದನ ನಿರೀಕ್ಷೆಯಲ್ಲಿದ್ದ ರಾಹುಲ್ ಮಹಾಜನ್‌ ಮತ್ತು ಡಿಂಪಿ ಗಂಗೂಲಿಗೆ ತೀವ್ರ ನಿರಾಶೆಯಾಗಿದೆ. ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ಡಿಂಪಿ ಗಂಗೂಲಿಗೆ ಗರ್ಭಸ್ರಾವವಾಗಿದೆ. ಸದ್ಯಕ್ಕೆ ಮುಂಬೈನಲ್ಲಿ ಚೇತರಿಸಿಕೊಳ್ಳುತ್ತಿರುವ ಡಿಂಪಿ ಈ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ.

ಎನ್‌ಡಿಟಿವಿ ಇಮ್ಯಾಜಿನ್‌ನ ಜನಪ್ರಿಯ ರಿಯಾಲಿಟಿ ಶೋ ಸ್ವಯಂವರ (ಸೀಸನ್ 2) 'ರಾಹುಲ್ ದುಲ್ಹನಿಯಾ ಲೇ ಜಾಯೇಗಾ' ಮೂಲಕ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಈ ನೂತನ ದಂಪತಿಗಳು ಚೊಚ್ಚಿಲ ಕಂದನ ನಿರೀಕ್ಷೆಯಲ್ಲಿದ್ದರು.

ಕಳೆದ ಸೋಮವಾರವೇ ಡಿಂಪಿಗೆ ಗರ್ಭಸ್ರಾವವಾಗಿದ್ದು, ಈ ಸುದ್ದಿಯನ್ನು ಗೌಪ್ಯವಾಗಿಡಲಾಗಿತ್ತು. ಆದರೂ ಸುದ್ದಿ ಹೇಗೋ ಬಹಿರಂಗವಾಗಿದೆ. ಬಂಗಾಳಿ ಚಿತ್ರ 'ಹಲೋ ಮೇಮ್‌ಸಾಬ್'ನಲ್ಲಿ ಅಭಿನಯಿಸುತ್ತಿರುವ ಡಿಂಪಿ ಸೆಪ್ಟೆಂಬರ್‌ನಲ್ಲಿ ಪ್ರಚಾರಕ್ಕಾಗಿ ಕೋಲ್ಕತ್ತಾಗೆ ಹೋಗಬೇಕಾಗಿತ್ತು. ಈಗ ಆಕೆಯ ಪರಿಸ್ಥಿತಿ ಹೀಗಾಗಿರುವ ಕಾರಣ ಬಂಗಾಳಿ ಚಿತ್ರದ ಕತೆಯೂ ನೆನೆಗುದಿಗೆ ಬಿದ್ದಿದೆ. (ಏಜೆನ್ಸೀಸ್)

More from Filmibeat

English summary
Dimpy Ganguly Mahajan, who found her husband Rahul Mahajan through Imagine TV's popular reality how Swayamvar's (Season 2) Rahul Dulhaniya Le Jaayega has had a miscarriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X