ಉಲ್ಲಾಸ ಉತ್ಸಾಹ ಚಿತ್ರಕ್ಕೆ ಡಿಟಿಎಸ್ ಸಿಂಗಾರ
ಕಾಂತಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ನಿರ್ಮಿಸುತ್ತಿರುವ 'ಉಲ್ಲಾಸ ಉತ್ಸಾಹ' ಚಿತ್ರಕ್ಕೆ ನಗರದ ಆಕಾಶ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಕೆ ಪ್ರಕ್ರಿಯೆನಡೆಯುತ್ತಿದೆ. ಕರ್ನಾಟಕದ ರಮ್ಯ ತಾಣಗಳಲ್ಲಲ್ಲದೆ ಹೊರ ರಾಜ್ಯಗಳಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರ ಸಂಪೂರ್ಣ ಮನೋರಂಜನೆಯಿಂದ ಕೂಡಿದೆ ಹಾಗೂ ಹದಿಹರೆಯದವರಿಗೆ ಹತ್ತಿರವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ ಅಪರೂಪದ ಕಲಾವಿದ ಗಣೇಶ್ ಈ ಚಿತ್ರದ ನಾಯಕನಾದರೆ, ಮುಂಬೈ ಬೆಡಗಿ ಯಾಮಿಗೌತಮಿ ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಾಮರ ಬಳಿ ಸಹಾಯಕರಾಗಿದ್ದ ದೇವರಾಜ್ ಪಾಲನ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಸದ್ಯದಲ್ಲೇ ತೆರೆಗೆ ಬರುವ ಈ ಚಿತ್ರಕ್ಕೆ ಕರುಣಾಕರನ್ ಕತೆ ಬರೆದಿದ್ದಾರೆ. ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣ ರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











