ಮಾ.30ರಿಂದ ಗೋವಿಂದಾಯ ನಮಃ ಪ್ಯಾರ್ ಶುರು
ಒಂದೇ ಒಂದು ಹಾಡಿನ ಮೂಲಕ ಯುವ ಜನಾಂಗದಲ್ಲಿ ಕ್ರೇಜ್ ಹುಟ್ಟಿಸಿರುವ 'ಗೋವಿಂದಾಯ ನಮಃ' ಚಿತ್ರ ಮಾರ್ಚ್ 30ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರದ "ಪ್ಯಾರ್‌ಗೆ ಆಗ್ಭುಟ್ಟೈತೆ" ಹಾಡನ್ನು ಯುವಕರು ನೀಂದ್ ಗೀಂದ್ ಎಲ್ಲಾ ಬಿಟ್ಟು ಕೇಳಿ ಆನಂದಿಸಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಾಟಾಗಿವೆ.
ಈ ಚಿತ್ರದಲ್ಲಿ ಕೋಮಲ್ ಜೊತೆ ನಾಲ್ಕು ಮಂದಿ ನಾಯಕಿಯರು ಅಭಿನಯಿಸಿದ್ದಾರೆ. ಮುಂಬೈ ಬೆಡಗಿ ಪಾರುಲ್, ಕನ್ನಡತಿ ರೇಖಾ, ಜಾರ್ಜಿಯಾ ಸುಂದರಿ ಆನಾ ಬಾರ್ಬರಾ ಹಾಗೂ ಮಧುಲಿಕಾ ಚಿತ್ರದ ನಾಯಕಿಯರು. ಗುರುಕಿರಣ್ ಸಂಗೀತವಿರುವ ಚಿತ್ರವನ್ನು ಪವನ್ ವಡೆಯರ್ ನಿರ್ದೇಶಿಸಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ತಬಲಾ ನಾಣಿ, ಮುಖ್ಯಮಂತ್ರಿ ಚಂದ್ರು, ಕಿರ್ಲೋಸ್ಕರ್ ಸತ್ಯ, ಹರೀಶ್ ರಾಜ್, ವಿನಾಯಕ ಜೋಷಿ ಮುಂತಾದವರಿದ್ದಾರೆ. ಕೆ ಎ ಸುರೇಶ್ ನಿರ್ಮಿಸಿರುವ ಈ ಚಿತ್ರದ "ಪ್ಯಾರ್‌ಗೆ ಆಗ್ಬುಟ್ಟೈತೆ" ಹಾಡಿನಂತೆ ಚಿತ್ರವೂ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











