ರಾಜೇಂದ್ರಸಿಂಗ್ ಬಾಬು ಮನೆ ಹರಾಜಿಗೆ ತಡೆ
ಚಿತ್ರ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಆರ್ ಟಿ ನಗರ ಮನೆ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 2007ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ರು.1.5 ಕೋಟಿ ಸಾಲ ಪಡೆದಿದ್ದರು. ಸಾಲದ ಕಂತನ್ನು ಪಾವತಿಸದ ಕಾರಣ ಬ್ಯಾಂಕ್ ಅವರ ಮನೆ ಹರಾಜಿಗೆ ಕ್ರಮ ಕೈಗೊಂಡಿತ್ತು.
ಈ ಸಂಬಂಧ ಬಾಬು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅವರ ಮನವಿಗೆ ಸ್ಪಂದಿಸಿ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆಗಸ್ಟ್ 6 ರೊಳಗೆ ರು.30 ಲಕ್ಷವನ್ನು ಪಾವತಿಸುವಂತೆ ಬಾಬು ಅವರಿಗೆ ಸೂಚಿಸಿದೆ.
ಬಾಬು ಮಾತನಾಡುತ್ತಾ, ಮನೆ ವಿಷಯಕ್ಕೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆ ಇತ್ತು. ಹಣ ಪಾವತಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದೇನೆ. ಆ.6ರೊಳಗಾಗಿ ರು.30 ಲಕ್ಷ ಪಾವತಿಸುವುದಾಗಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದರು.
More from Filmibeat
ಎಸ್ ವಿ ರಾಜೇಂದ್ರಸಿಂಗ್ ಬಾಬು ಹರಾಜು ಸಾಲ ಎಸ್ ಬಿಐ ಆರ್ ಟಿ ನಗರ ತಿಪ್ಪಾರಳ್ಳಿ ತರ್ಲೆಗಳು sv rajendra singh babu bank loan sbi rt nagar thipparalliya tarlegalu bhimoos bang bang kids


Click it and Unblock the Notifications











