For Quick Alerts
ALLOW NOTIFICATIONS  
For Daily Alerts

ನಿತ್ಯಾ ಎಂಬ ಮಂಗಳೂರು ಪೋರಿ ಸೆರೆ ಸಿಕ್ಕಳು

By Staff
|

ಕನ್ನಡ ಚಿತ್ರದಲ್ಲಿ ನಾಯಕಿಯರ ಕೊರತೆ ಕಂಡು ಬರುತ್ತಿದೆಯೇ? ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹಬ್ಬುತ್ತಿದೆ. ಈಗ ಚಾಲ್ತಿಯಲ್ಲಿರುವ ಕನ್ನಡ ಮೂಲದ ನಾಯಕಿಯರ ಹೆಸರುಗಳನ್ನು ಹೇಳ ಹೊರಟರೆ ತಡವರಿಸುತ್ತಾ ನಾಲ್ಕಾರು ಹೆಸರನ್ನು ಉದುರಿಸಬಹುದು ಅಷ್ಟೆ.

ಮಲೆನಾಡಿಗ

ಲಕ್ಕಿ ಸ್ಟಾರ್ ರಮ್ಯಾ ಕೈಲಿ ಸಾಕಷ್ಟು ಚಿತ್ರಗಳಿಲ್ಲ. ಉಪೇಂದ್ರ ಹಾಗೂ ಸುದೀಪ್ ಜತೆ ರಮ್ಯಾ ಮತ್ತೆ ನಟಿಸುತ್ತಿರುವುದು ಉತ್ತಮ ಬೆಳವಣಿಗೆ. ನೀತಾ, ಡೈಸಿ ಈಗಷ್ಟೆ ತಾರಾವರ್ಚಸ್ಸಿಗೆ ಬರುತ್ತಿದ್ದಾರೆ. ಸ್ಮಿತಾ ಎರಡೇ ಚಿತ್ರಕ್ಕೆ ನಿರ್ಮಾಪಕರ ಮುನಿಸಿಗೆ ಸಿಕ್ಕಿದ್ದಾರೆ. ಭಾವನಾ ಸೆಕೆಂಡ್ ಇನ್ನಿಂಗ್ಸ್ ಒಪನಿಂಗ್ ಮುಂಚೆನೇ ಪೆವಲಿಯನ್ ಕಡೆಗೆ ತಿರುಗಿದೆ. ರೇಖಾ, ಆಶಿತಾ, ಸಿಂಧು ಮೆನನ್ ತುಂಡು ಲಂಗಧರಿಸಿ ತೆಲುಗು, ತಮಿಳಿನಲ್ಲಿ ವ್ಯಸ್ತರಾಗಿದ್ದಾರೆ.

ಇದಕ್ಕೆ ಯಾರು ಕಾರಣ? ನಮ್ಮ ನಿರ್ಮಾಪಕರೇ? ನಾಯಕರೇ? ಅಥವಾ ಸ್ವತಃ ನಾಯಕಿಯರೇ? ಉತ್ತರ ಗಾಂಧಿನಗರದದೇವರೇ ಬಲ್ಲ.

ನಮ್ಮ ನಾಯಕನಟರಿಗೆ ಪರಭಾಷಾ ನಾಯಕಿಯರ ಮೇಲೆ ಕಣ್ಣು. ಅವರಲ್ಲಿ ಇಲ್ಲಿಗೆ ಬಂದು ನೆಲೆಯೂರುವ ಲಕ್ಷಣ(ನಟನೆಯಲ್ಲಿ ಅವಲಕ್ಷಣಕಾರಿಯಾದರೂ) ತೋರಿರುವವರಲ್ಲಿ ಪೂಜಾಗಾಂಧಿ ಉರುಫ್ ಸಂಜನಾಗಾಂಧಿ ಪ್ರಮುಖ ಹೆಸರು. ರಮೇಶ್ ಆದ್ರೂ ಸೈ, ಜಗ್ಗೇಶ್ ಆದ್ರೂ ಜೈ ಅಂದ ಪೂಜಾ ಪಾಲಿಗೆ ಅವಕಾಶಗಳ ಮಳೆ ಸುರಿದಿದೆ. ಉಳಿದಂತೆ ಜೆನಿಫರ್ , ಮಲ್ಲಿಕಾ ಕಪೂರ್, ರಮಣೀತೋ ಚೌಧರಿ ಇಲ್ಲೇ ನಟನೆ ಕಲಿಯುವುದೆಂದು ಶಪಥ ಮಾಡಿದ್ದಾರಂತೆ. ಮಮತಾ ಮೋಹನ್ ದಾಸ್, ಹಂಸಿಕಾ, ಅರ್ಚನಾ, ಜೆನಿಲಿಯಾ, ರೋಮಾ ಹೀಗೆ ಪಟ್ಟಿ ಬೆಳೆಯುತ್ತೆ. ಮಲೆಯಾಳಿ ಚೆಲುವೆಯರು ಇದ್ದದ್ದರಲ್ಲಿ ವಾಸಿ, ನವ್ಯಾ ನಾಯರ್, ಮೀರಾ ಜಾಸ್ಮಿನ್, ಪಾರ್ವತಿ ಮೆಲ್ಟನ್ ಹಾಗೂ ಈ ಮುಂಚೆ ನಟಿಸಿದ ಶಿಲ್ಪಾ, ಸಿತಾರಾ ಅವರ ನಟನೆ ಬಗ್ಗೆ ಕೆಮ್ಮಂಗಿಲ್ಲ ಬಿಡಿ.

ಇವರೆಲ್ಲಾ ಹಾಂಗಿರಲಿ ನಮ್ಮ ಕನ್ನಡ ನಾಯಕಿಯರತ್ತ ಒಮ್ಮೆ ನೋಡೋಣ. ಇಂತಿ ನಿನ್ನ ಪ್ರೀತಿಯ ಸೋನುಗೆ ಪ್ರಜ್ವಲ್ ಜತೆ ನಟಿಸುವ ಅವಕಾಶ ಸಿಕ್ಕಿದೆ. ರಶ್ಮಿ ಅಕ್ಕತಂಗಿ ಕರುಳಿನ ಕಥೆಗೆ ಬ್ರಾಂಡ್ ಆಗುವ ಸಾಧ್ಯತೆಗಳಿವೆ. ಉಳಿದಂತೆ ಟಿವಿ ನಿರೂಪಕಿಯರಾದ ಕಾವ್ಯ, ಶ್ವೇತಶ್ರೀ ಚಿತ್ರರಂಗದಲ್ಲಿ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ. ಶರ್ಮಿಳಾ ಮಾಂಡ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನೋ ರೀತಿ ಇದ್ದಾರೆ. ನಿಧಾನವಾಗಿ ಅದರೂ ಡೈಸಿ, ನೀತಾ ಅವರನ್ನು ಒಪ್ಪಿಕೊಂಡ ಪ್ರೇಕ್ಷಕ ಮಹಾಶಯನಿಗೆ ಅವರನ್ನು ನೆಚ್ಚಿನ ನಾಯಕ ಜೋಡಿಯಾಗಿ ಕಾಣುವ ಭಾಗ್ಯ ಸಿಗುವ ಲಕ್ಷಣಗಳು ಸದ್ಯಕ್ಕಿಲ್ಲ. ಮುಖ್ಯಮಂತ್ರಿ ಐ ಲವ್ ಯೂ ಹೇಳ ಹೊರಟಿರುವ ಹರಿಪ್ರಿಯಾ ಇಲ್ಲೇ ಉಳಿಯುವ ಹವಣಿಕೆಯಲ್ಲಿದ್ದಾರೆ. ಶುಭಾ ಪುಂಜಾ ಅಂದಾನೆ ಚೆಂದಾನೆ ಹೊರತು ನಟನೆ ವಿಷಯಕ್ಕೆ ಬಂದರೆ ದೊಡ್ಡ ಪೂಜಿನೆ.

ಹೀಗೆ ಹುಡುಕುತ್ತಿದ್ದಾಗ ಸಿಕ್ಕ ಮುದ್ದು ಮೊಗದ ಈ ಸುಂದರಿಯ ಬಗ್ಗೆ ಕೊಂಚ ಹೇಳೊಣ ಅನಿಸಿತು. ಈಕೆ ಹೆಸರು ನಿತ್ಯಾ. ಮಂಗಳೂರು ಮೂಲದ ಬೆಡಗಿ. ನಿಮಗೆ ನೆನಪಿದ್ದರೆ ಸೆವನ್ ಓ ಕ್ಲಾಕ್ ಎಂಬ ಚಿತ್ರದಲ್ಲಿ ನಾಯಕಿಯ ತಂಗಿಯಾಗಿ ಉತ್ತಮ ಅಭಿನಯ ನೀಡಿದ ಹುಡುಗಿ. ಆಗ ಆಕೆಯ ಅಭಿನಯದ ಬಗ್ಗೆ ಮಾಧ್ಯಮ ಮಿತ್ರರಿಂದ ಪ್ರಶಂಸೆಗಳ ಬಂದಿದ್ದವು. ಆದರೆ 'ನನಗೆ ಮುಂದೆ ವ್ಯಾಸಂಗದಲ್ಲಿ ಆಸಕ್ತಿಯಿದೆ ನಾನು ಸಿನೆಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಚಿತ್ರವನ್ನು ಗೆಳೆಯ ಸಂತೋಷ್ ಕುಮಾರ್ ಪಾತಾಜೆಗಾಗಿ(ಸೆವನ್ ಓ ಕ್ಲಾಕ್ , ಸವಿಸವಿ ನೆನಪು ಚಿತ್ರ ನಿರ್ದೇಶಕ) ಒಪ್ಪಿಕೊಂಡೆ 'ಎಂದು ನಿತ್ಯಾ ಆಗ ಹೇಳಿದ್ದರು.

ಆದರೆ ಈಗ ಮಲೆಯಾಳಂನಲ್ಲಿ ನಟ ಮೋಹನ್ ಲಾಲ್ ಜತೆ ಅಭಿನಯಿಸುವ ಸುವರ್ಣ ಅವಕಾಶ ದೊರೆಕಿದ್ದರಿಂದಲೊ ಅಥವಾ ನಟನೆಯಲ್ಲೇ ವ್ಯಾಸಂಗ ಮುಂದುವರಿಸುವ ಹಂಬಲದಿಂದಲೋ ಏನೋ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಆಕಾಶ ಗೋಪುರಂ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಯಾವಾಗ ಕಾಲಿರಿಸುತ್ತಾರೆ ಎಂಬುದನ್ನು ಇನ್ನೂ ಯಾರೂ ಕೇಳಿದಂತಿಲ್ಲ. ನಮ್ಮಲ್ಲಿ ಅವಕಾಶಕ್ಕೆ ಬರವಿಲ್ಲ, ಕೆಲ ನಿರ್ಮಾಪಕರ ಕಿರಿಕಿರಿಯನ್ನು ಬದಿಗಿಟ್ಟರೆ, ನಾಯಕರಂತೂ ನಾಯಕಿಯರ ಪಾಲಿಗೆ ಹೀರೋಗಳಂತೆ ಇದ್ದಾರೆ. ಆದರೂ ಇಲ್ಲಿಂದ ಬೇರೆಡೆಗೆ ಹಾರುವ ಕನ್ನಡದ ಕುವರಿಯರ ಮನದಾಳವನ್ನು ತಿಳಿವುದು ಕಷ್ಟ ಕಷ್ಟ.

ನೆರೆರಾಜ್ಯದಲ್ಲಿ ಬೇರುಬಿಟ್ಟಿರುವ ಕನ್ನಡತಿಯರು : ನಿತ್ಯಾ, ಅಕ್ಷರ, ರಮ್ಯಾ, ಸಿಂಧು ಮೆನನ್, ರಾಧಿಕಾ, ಸಂಜನಾ

ಪಕ್ಕದೂರಿನಿಂದ ಆಮದಾಗಿರುವ ಸುಂದರಾಂಗಿನಿಯರು : ಜೆನಿಲಿಯಾ, ಮಮತಾ ಮೋಹನದಾಸ್, ನಮಿತಾ, ಮಧುಮಿತಾ

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more