ಮುಹೂರ್ತದ ನಂತರ ಅಕ್ಷಯ್ 'ಸಿಂಡ್ರೆಲ್ಲಾ' ನಾಪತ್ತೆ

ಮಾರುತಿ ರಾಜ್ ಹೆಸರಿನ ನಿರ್ಮಾಪಕರು ಸಿಂಡ್ರೆಲ್ಲಾ ಚಿತ್ರಕ್ಕೆ ರು. 1.25 ಕೋಟಿ ಖರ್ಚು ಮಾಡಿ ಸಾಕಷ್ಟು ಶೂಟಿಂಗ್ ಕೂಡ ನಡೆಸಿದ್ದರು. ಧರ್ಮಗಿರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಚಿತ್ರೀಕರಣ ಅರ್ಧಕ್ಕೇ ನಿಂತಿದ್ದು ಮುಂದುವರಿಯುವ ಸೂಚನೆ ಕಾಣಿಸುತ್ತಿಲ್ಲ. ಅಕ್ಷಯ್ ನಾಯಕ ಹಾಗೂ ಸುಷ್ಮಾ ನಾಯಕಿ. ಪಿ ಸುದರ್ಶನ್ ಸಂಗೀತ ಚಿತ್ರಕ್ಕಿದೆ.
ಚಿತ್ರತಂಡ ಮೌನವಾಗಿದೆ. ಚಿತ್ರಕ್ಕೆ ಯಾವ ಕಡೆಯಿಂದ, ಯಾವ ರೀತಿ ವಿಘ್ನ ಕಾದಿದೆಯೋ ಸುದ್ದಿಯಿಲ್ಲ. ನಾಯಕಿ ಸುಷ್ಮಾರ ನಂತರದ ಎರಡು ಚಿತ್ರಗಳು ಬಿಡುಗಡೆ ಭಾಗ್ಯ ಕಂಡಿವೆ. ಆದರೆ ಸಿಂಡ್ರೆಲ್ಲಾ ಕಥೆ ಏನು ಎನ್ನುವುದು ಸದ್ಯಕ್ಕೆ ನಿಗೂಢ. ಈ ಸುದ್ದಿಯ ನಂತರವಾದರೂ ಪತ್ತೆಯಾದರೆ ಸಾಕು ಎಂಬಂತಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Movie Cinderella shooting discontinued. Madhukar Belakawadi direction for this movie. Akshay Sushma Pair for this.


Click it and Unblock the Notifications











