ಬ್ಲಾಕ್ ಬಸ್ಟರ್ ಚಿತ್ರವಾಗಿ ಪುನೀತ್ ಹುಡುಗರು

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಬಹುತಾರಾಗಣದ ಚಿತ್ರ 'ಹುಡುಗರು' ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹುಡುಗರು 40 ಕೇಂದ್ರಗಳಲ್ಲಿ ಅರ್ಧ ಶತಕ ಬಾರಿಸಿದೆ.

ಹುಡುಗರು ಹೀಗೆ ಮುಂದುವರೆದರೆ ಶತಕ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಚಿತ್ರಕ್ಕೆ ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳಿನ ಯಶಸ್ವಿ ಚಿತ್ರ 'ನಾಡೋಡಿಗಳ್' ರೀಮೇಕ್ ಚಿತ್ರ ಇದಾಗಿತ್ತು. ಕನ್ನಡದಜಾಯಮಾನಕ್ಕೆ ತಕ್ಕಂತೆ ಈ ಚಿತ್ರವನ್ನು ತೆರೆಗೆ ತಂದಿದ್ದರು ನಿರ್ದೇಶಕ ಮಾದೇಶ.

ಇಬ್ಬರು ಪ್ರೇಮಿಗಳನ್ನು ಒಂದು ಮಾಡಲು ಹೋಗಿ ನಾನಾ ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವ ಕಥಾಹಂದರದ ಚಿತ್ರವಿದು. ಶ್ರೀನಗರ ಕಿಟ್ಟಿ, ಲೂಸ್ ಮಾದ ಯೇಗೇಶ್ ಹಾಗೂ ರಾಧಿಕಾ ಪಂಡಿತ್ ಅಭಿಯನ ಮೆಚ್ಚುಗೆಗೆ ಪಾತ್ರವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿ ಹರಿಕೃಷ್ಣ ಸಂಗೀತ ಗಮನಸೆಳೆದ ಸಂಗತಿ. ತಮ್ಮ ಚಿತ್ರ ಒಂದು ಹಂತಕ್ಕೆ ಯಶಸ್ವಿಯಾಗಲು ಕಾರಣರಾದ ಪ್ರತಿಯೊಬ್ಬರಿಗೂ ರಾಘವೇಂದ್ರ ರಾಜ್ ಕುಮಾರ್ ಥ್ಯಾಂಕ್ಸ್ ಹೇಳಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Power Star Puneet Rajkumar lead movie Hudugaru declared as Blockbuster. The movie has completed more than 50 days in around 40 centres in Karnataka.The movie directed by Maadesh has Radhika Pandit, Srinagara Kitty and Yogish in the lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X